ಕುರುಳ್ ಅಥವಾ ತಿರುಕ್ಕುರುಳ್ ತಮಿಳಿನ ವೇದವೆಂದೇ ಕೊಂಡಾಡಲ್ಪಟ್ಟ ಭಕ್ತಿಯಿಂದ ಅಲ್ಲಿಯ ಜನತೆ ಸ್ವೀಕರಿಸಿರುವ ಗ್ರಂಥ. ಎಲ್ಲಾ ಕಡೆಗಳಿಂದಲೂ ಒಳ್ಳೆಯದನ್ನು ಆರಿಸಿಕೊಂಡು ಮಾಲೆಯಾಗಿ ಪೋಣಿಸಿ ಈ ಕೃತಿಯನ್ನು ರಚಿಸಿದ್ದಾರೆ. ಈ ಪುಸ್ತಕದಲ್ಲಿರುವ ನಾಲ್ಕು ಪುರುಷಾರ್ಥಗಳಲ್ಲಿ ಮೂರನ್ನು, ಅಂದರೆ ಧರ್ಮ, ಅರ್ಥ ಮತ್ತು ಕಾಮಗಳನ್ನು ಕುರಿತ ಮೂರು ಭಾಗಗಳಿವೆ. ವಾಮನನು ತನ್ನೆರಡು ಪಾದಗಳಿಂದ ವಿಶ್ವವನ್ನೆಲ್ಲಾ ಆಕ್ರಮಸಿದಂತೆ, ದ್ರಾವಿಡ ಛಂದಸ್ಸಿನಲ್ಲಿಯೇ ಅತ್ಯಂತ ಚಿಕ್ಕದಾದ ಕುರುಳ್ ಎಂಬ ಛಂದಸ್ಸಿನಲ್ಲಿ ವಿಶ್ವದ ಜ್ಞಾನವನ್ನೆಲ್ಲಾ ತನ್ನಲ್ಲಿ ಅಡಗಿಸಿಕೊಂಡಿದೆ. ಈ ಕೃತಿಯನ್ನು ಕನ್ನಡ, ತಮಿಳು ಎರಡೂ ಭಾಷೆಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಹೊಂದಿದ್ದಎಲ್ ಗುಂಡಪ್ಪನವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.