ಸ್ವಾಮಿ ವಿವೇಕಾನಂದರು ನಿಜವಾಗಿ ಯಾರು? ಒಬ್ಬ ಧರ್ಮಗುರುವೇ, ಒಬ್ಬ ಧಾರ್ಮಿಕ ಪುರುಷನೇ, ಒಬ್ಬ ಪ್ರವಚನಕಾರನೇ, ಪರಿವಾರದ ಚೌಕಟ್ಟಿನಲ್ಲಿರುವ ಒಬ್ಬ ದಕ್ಷ ಹಿಂದುವೇ? ಅಥವಾ ಪರಿವರ್ತನೆಯ ಚಳುವಳಿಯ ಅಗ್ರದೂತರಾಗಿದ್ದರೆ? ಇಲ್ಲವೇ ದೇಶದ ಮೊದಲ ಸಾಮ್ಯವಾದಿಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಕೃತಿಯಲ್ಲಿದೆ. ವಿವೇಕಾನಂದ ಕುರಿತಂತೆ ನಮಗೆ ಹೆಚ್ಚಾಗಿ ಕಾಣಿಸದ ಅವರ ಪಾರ್ಶ್ವ ವ್ಯಕ್ತಿತ್ವವೊಂದು ಈ ಕೃತಿಯಲ್ಲಿ ಅನಾವರಣಗೊಂಡಿದೆ. ಚಂದ್ರಕಾಂತ ಪೋಕಳೆ ಅವರು ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ವಿವೇಕಾನಂದರ ಅಸಂಖ್ಯಾತ ಪತ್ರ, ಟಿಪ್ಪಣಿ, ಗ್ರಂಥ, ಸ್ವತಃ ವಿವೇಕಾನಂದರೇ ಬರೆದ ಲೇಖನ, ಮಾಡಿದ ಭಾಷಣ ಪ್ರತಿಕ್ರಿಯೆ ಹೀಗೆ ಎಲ್ಲ ದಾಖಲೆಗಳನ್ನು ಎದುರಿಸಿ ನಡೆಸಿದ ಚರ್ಚೆಗಳ ಬಗ್ಗೆ ವಿವರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ವಿವೇಕಾನಂದರನ್ನು ಅರ್ಥ ಮಾಡಿಕೊಳ್ಳುವ ಮೂಲಕ ಹುಸಿ ಹಿಂದುತ್ವವನ್ನು ಹೇಗೆ ಎದುರಿಸಬಹುದು ಎನ್ನುವುದಕ್ಕೆ ಕೃತಿ ನಮಗೆ ತಿಳಿಸುತ್ತದೆ. ವಿವೇಕಾನಂದರ ಅತಿ ವೈಭವೀಕರಣ, ಹಾಗೆಯೇ ಕೇಸರೀಕರಣ, ಇನ್ನೊಂದು ವಿವೇಕಾನಂದರ ಸಾಮಾನೀಕರಣ. ಅವರು ಹೇಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದರು ಎನ್ನುವುದನ್ನು ಹೇಳುವ ಬರಹಗಳನ್ನು ಈ ಕೃತಿಯೂ ಒಳಗೊಂಡಿವೆ.
©2024 Book Brahma Private Limited.