ಅನುಭಾವದ ವಚನಗಳಿಗೂ ಗಣಿತಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ ಎನ್ನುವಂತಿಲ್ಲ. ಶರಣರ ವಚನಗಳಲ್ಲಿರುವ ಗಣಿತದ ಅಂಶಗಳನ್ನು ಹೆಕ್ಕಿ ಅದನ್ನು ರಸವತ್ತಾಗಿ ಉಣಬಡಿಸಿದ್ದಾರೆ ಮಲ್ಲಿಕಾರ್ಜುನ ಯಾಳವಾರ.
ಶರಣರ ವಚನಗಳನ್ನು ಗಣಿತದ ನೆಲೆಯಲ್ಲಿ ವಿಶ್ಲೇಷಿಸುತ್ತದೆ ಕೃತಿ. 29 ವಚನಕಾರರ 62 ವಚನಗಳು ಇಲ್ಲಿವೆ.
ಪ್ರಸಿದ್ಧ ಗಣಿತಜ್ಞರ ಸಿದ್ಧಾಂತಗಳೊಂದಿಗೆ ವಚನಗಳಲ್ಲಿರುವ ಅಂಕಿಅಂಶಗಳನ್ನು ತಾಳೆ ಹಾಕಿಯೂ ನೋಡಲಾಗಿದೆ. ಭಾಜಕ ಸಂಖ್ಯೆ, ಸಂಖ್ಯಾ ವಿಭಜನೆ, ತ್ರಿಭುಜ ಸಂಖ್ಯೆ, ಪೈ ನಕ್ಷೆ, ವೃತ್ತ, ಶೂನ್ಯ, ಚತುರ್ಭುಜ, ಗೋಲ, ಶಂಕು, ಮಾಯಾಚೌಕ, ಪರವಾಹಕ ಜಾಲಾಕೃತಿ ಇತ್ಯಾದಿಗಳಿಗೂ ವಚನಗಳಿಗೂ ಇರುವ ಸಾಂಗತ್ಯವನ್ನು ಚರ್ಚಿಸಲಾಗಿದೆ.
©2025 Book Brahma Private Limited.