ವಚನಕಾರರ ವೃತ್ತಿ ಮಹತ್ವವನ್ನು ಅಧ್ಯಯನ ಮಾಡುವ ವಿಶಿಷ್ಟ ಗ್ರಂಥ ‘ವಚನಕಾರರ ವೃತ್ತಿ ಮೌಲ್ಯಗಳು - ಒಂದು ಅಧ್ಯಯನ’. ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಹನ್ನೆರಡನೇ ಶತಮಾನದ ಕಾಯಕ ಜೀವಿಗಳ ವೃತ್ತಿ ಸಮಾಜದ ಮೇಲೆ ಬೀರಿದ ಪರಿಣಾಮಗಳನ್ನು ಕೃತಿ ಹೇಳುತ್ತದೆ.
ವೃತ್ತಿಯಲ್ಲಿನ ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ, ವಚನಕಾರರ ವೃತ್ತಿಗಳಲ್ಲಿ ಅನುಭಾವದಂತಹ ಅಂಶಗಳನ್ನು ಹೊಸ ಆಯಾಮಗಳ ಮೂಲಕ ನಿರೂಪಿಸಲಾಗಿದೆ. 235ಕ್ಕೂ ಹೆಚ್ಚು ವಚನಕಾರರ ಕಾಯಕದ ವಿವರಗಳನ್ನು ಅವರ ಅಂಕಿತದೊಂದಿಗೆ ಇಲ್ಲಿ ದಾಖಲಿಸಲಾಗಿದೆ.
2005ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ. ಪದವಿಗಾಗಿ ಸಾದರಪಡಿಸಿದ ಈ ಸಂಶೋಧನಾ ಪ್ರಬಂಧಕ್ಕೆ ಡಾ ಬಸವರಾಜ ಸಬರದ ಅವರ ಮಾರ್ಗದರ್ಶನ ಇದೆ.
©2024 Book Brahma Private Limited.