ಮುಸ್ಲಿಮರಾಗಿ ಜನಿಸಿ, ಹಿಂದೂ ಮುಸ್ಲಿಮರಲ್ಲಿ ಭಾವೈಕ್ಯತೆ ತೋರಿದ, ತಮ್ಮ ತತ್ವಪದಗಳ ಮೂಲಕ ಜೀವನ ಸಾರವನ್ನು, ಶಾಂತೀಯ ಸಂದೇಶವನ್ನು ಸಾರಿದ ಮಹಾನ್ ದಾರ್ಶನಿಕ “ಷರೀಫ” ರು , ಕಳೆದ ನಾಲ್ಕು ದಶಕಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರವೇ ಪರಿಚಿತರಾಗಿದ್ದರು. ನಂತರ ಶಾಂತಿ , ಸೌಹಾರ್ದತೆಯನ್ನೇ ಮೂಲವನ್ನಾಗಿ ಮಾಡಿದ ಷರೀಫರು ತಮ್ಮ ಸೌಹಾರ್ದ ಮತ್ತು ದೇಸಿ ಗಾನ ಸೊಗಡಿನ ಕಾರಣಕ್ಕಾಗಿಯೇ ಪ್ರಸ್ತುತ ಇಡೀ ಕನ್ನಡ ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದಿದ್ದಾರೆ. ಇವರ ಜೀವನ ಚರಿತ್ರೆಯನ್ನು ಮಾತ್ರವಲ್ಲದೆ ಅವರ ತತ್ವಪದಗಳಲ್ಲಿರುವ ಧಾರ್ಮಿಕ, ರಾಜಕೀಯ, ವಿಡಂಬನಾ ಪ್ರಜ್ಞೆಯ ಜೊತೆಗೆ ದೇವರು, ಭಕ್ತಿ ಬದುಕುಗಳ ಕುರಿತು ಈ ಪುಸ್ತಕದಲ್ಲಿ ಮಾಹಿತಿಗಳನ್ನು ಒದಗಿಸಲಾಗಿದೆ.
©2025 Book Brahma Private Limited.