ಮೈಸೂರಿನ ಹುಲಿ ಎಂದೇ ಪ್ರಖ್ಯಾತನಾದ ದೊರೆ ಟಿಪ್ಪುಸುಲ್ತಾನ. "ಪ್ರಪಂಚದ ಚರಿತ್ರೆಯಲ್ಲಿ ತನ್ನ ನಾಡಿನ ರಕ್ಷಣೆಗಾಗಿ ಇಬ್ಬರು ಮಕ್ಕಳನ್ನು ಶತ್ರುವಿಗೆ ಒತ್ತೆ ಇಟ್ಟಿದ್ದು ಮಾತ್ರವಲ್ಲದೆ, ರಣಾಂಗಣದಲ್ಲಿ ಬ್ರಿಟಿಷರ ವಿರುದ್ದ ಯುದ್ದ ಮಾಡುತ್ತಲೇ ಮಡಿದ ಏಕೈಕ ದೊರೆ ಟಿಪ್ಪು ಮಾತ್ರ." ಅನ್ನೋದು ಫ್ರೆಂಚ್ ಸಂಶೋಧಕನೊಬ್ಬನ ಮಾತು. ಇಂತಹ ಮಹಾನ್ ವೀರ ಟಿಪ್ಪು ಸುಲ್ತಾನನ ಕುರಿತು ಕನ್ನಡ ಕವಿಗಳು, ಲೇಖಕರು ಬರೆದ ಕವನಗಳನ್ನು, ಲೇಖನಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಇಲ್ಲಿ ಶಿವರಾಮಯ್ಯನವರ - ಸಾಹಿತಿಗಳು ಕಂಡ ಟಿಪ್ಪು, ಎಸ್. ಸುಂದರ್ ಅವರ -ಟಿಪ್ಪು ಕಾಲದ ಕಲಾ ವಿನ್ಯಾಸ, ಎಸ್. ವೆಂಕಟೇಶ್ ಅವರ -ಕಲಾವಿದರ ಕಣ್ಣಲ್ಲಿ ಟಿಪ್ಪು ಮುಂತಾದ ಲೇಖನಗಳ ಜೊತೆಗೆ ಸಂ. ಲಿಂಗದೇವರು ಹಳೇಮನಿ ಅವರ ಅನುಬಂದ-ಲಾವಣಿ, ಕುವೆಂಪು ಅವರ -ಕರ್ನಾಟ ರಾಷ್ಟ್ರಗೀತೆ, ಎಂ. ಗೋಪಲಕೃಷ್ಣ ಅಡಿಗರ- ಟೀಪುವೇ, ಬಂಜಗೆರೆ ಜಯಪ್ರಕಾಶ್ ಅವರ-ಟೀಪು, ಮೂಗಳ್ಳಿ ಗಣೇಶ್ ಅವರ- ಟಿಪ್ಪು ಕೇಳಿದ್ದ ಕನಸಲ್ಲಿ, ಮಹಾತ್ಮರ ಜೊತೆಯಲ್ಲಿ ಮುಂತಾದ ಕವನಗಳಿವೆ.
©2024 Book Brahma Private Limited.