ಒಂದು ಭಾಷೆಯ ಹಿಂದೆ ಒಂದು ಜನಜೀವನವಿದೆ. ಇಂತಹ ನೂರಾರು ವೈವಿಧ್ಯಮಯ ಸಂಸ್ಕೃತಿಯ ಮೂಲಕ ರೂಪುಗೊಂಡ ನೂರಾರು ಭಾಷೆಗಳಲ್ಲಿ ನಮ್ಮ ಭಾರತೀಯತೆ ಬೆಸೆದುಕೊಂಡಿದೆ. ಆದರೆ ಇತ್ತೀಚೆಗೆ ದೇಶವನ್ನು ಒಂದು ಭಾಷೆಯ ಮೂಲಕ ಜೋಡಿಸುವ ಕೆಟ್ಟ ಪ್ರಯತ್ನ ನಡೆಯುತ್ತಿರುವುದನ್ನು, ಪ್ರಾದೇಶಿಕ ಭಾಷೆಗಳು ಇದರ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಡಾ. ಎಸ್. ಸಿರಾಜ್ ಅಹಮದ್ ಅವರ ಸಂಪಾದಕತ್ವದಲ್ಲಿ ಭಾರತದ ಬಹು ಭಾಷಿಕ ಪರಿಸರ ಮತ್ತು ಅನುವಾದ ಕೃತಿಯನ್ನು ಹೊರತಂದಿದೆ. ಅನುವಾದ ಹೇಗೆ ಬಹುಭಾಷೆಯನ್ನು ಜೋಡಿಸುವ ಕೊಂಡಿಯಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎನ್ನುವ ಹಿನ್ನೆಯಲ್ಲಿ ರೂಪುಗೊಂಡ ಕೃತಿ ಇದಾಗಿದ್ದು. ಬಹುಭಾಷಿಕ ಪರಿಸರದಲ್ಲಿ ಅನುವಾದವೆಂಬುದು ಔಪಚಾರಿಕ ಮತ್ತು ಅನೌಪಚಾರಿಕ ನೆಲೆಗಳಲ್ಲಿ ಕಾರ್ಯಪ್ರವೃತ್ತವಾಗಿರುವ ಪ್ರಕ್ರಿಯೆಯಾಗಿದೆ. ಅನುವಾದವೆಂಬುದು ಬಹುಭಾಷಿಕ ಪರಿಸರದಲ್ಲಿ ನಿರ್ವಹಿಸುತ್ತಿರುವ ಹೊಣೆಗಳು ಮತ್ತು ನಿರ್ವಹಿಸಬಹುದಾದ ಹೊಣೆಗಳನ್ನು ಈ ಕೃತಿ ಚರ್ಚಿಸುತ್ತದೆ.
©2024 Book Brahma Private Limited.