‘ಲಕ್ಷೀಶನ ಜೈಮಿನಿ ಭಾರತ’ ಕನ್ನಡ ಸಾಹಿತ್ಯದ ಕಾವ್ಯಪ್ರಪಂಚದಲ್ಲಿ ಬಹುಜನಪ್ರಿಯತೆಯನ್ನು ಗಳಿಸಿರುವ ಷಟ್ಟದೀ ಕಾವ್ಯ. ಲಾಲಿತ್ಯ ಮತ್ತು ಮಾಧುರ್ಯದಿಂದ ಸಾಮಾನ್ಯ ಜನತೆಯನ್ನೂ ಆಕರ್ಷಿಸಿ ಹಳ್ಳಿಹಳ್ಳಿಗಳಲ್ಲಿ ವಾಚನ ಮಾಡಿಸಿಕೊಂಡಿರುವ ಅಪೂರ್ವ ಕಾವ್ಯವಾದ ಲಕ್ಷ್ಮೀಶನ ಈ ಜೈಮಿನಿ ಭಾರತ ಕೃತಿಯನ್ನು ಲೇಖಕರಾದ ಬಿ.ಎಸ್. ಸಣ್ಣಯ್ಯ ಹಾಗೂ ಡಾ. ರಾಮೇಗೌಡ ಅವರು ಅರ್ಥಕೋಶ, ಕಥಾಸಾರಗಳ ಮೂಲಕ ಸರಳ ಭಾಷೆಯಲ್ಲಿ ವಿಶ್ಲೇಷಿಸಿದ್ದಾರೆ. ಈ ಕೃತಿಯಲ್ಲಿ ಜೈಮಿನಿ ಭಾರತ, ಅನುಬಂಧಗಳು, ಹೆಚ್ಚಿನ ಪದ್ಯಗಳು, ಕಥಾಸಾರ ಹಾಗೂ ಅರ್ಥಕೋಶ ಎಂಬ ವಿಭಾಗಗಳಲ್ಲಿ ಮಹಾಕಾವ್ಯವನ್ನು ವಿಶ್ಲೇಷಿಸಿದ್ದಾರೆ.
©2024 Book Brahma Private Limited.