ಸಾಹಿತ್ಯ ಮಹರ್ಷಿ ಎಂದೇ ತಮ್ಮ ಅಚ್ಚಳಿಯದ ಛಾಪು ಮೂಡಿಸಿರುವ ರಷ್ಯಾ ದೇಶದ ಸಾಹಿತ್ಯ ಸಂತ ಲಿಯೋ ಟಾಲ್ ಸ್ಟಾಯ್ ಅವರ ಯುದ್ಧ ಮತ್ತು ಶಾಂತಿ ಕಾದಂಬರಿಯು ಸರಣಿ ರೂಪದಲ್ಲಿ ಪ್ರಕಟವಾಗಿ ಅತ್ಯಂತ ಶ್ರೇಷ್ಠ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುದ್ಧ ಮತ್ತು ಶಾಂತಿ ಭಾಗ-1 ಹಾಗೂ ಬಾಗ-2 ಹೀಗೆ ಎರಡು ಪ್ರತ್ಯೇಕ ಕೃತಿಗಳನ್ನು ರಚಿಸಿರುವ ಓ.ಎಲ್. ನಾಗಭೂಷಣ ಸ್ವಾಮಿ ಅವರು ‘ಯುದ್ಧ ಮತ್ತು ಶಾಂತಿ ಪುಟ್ಟ ಕೈಪಿಡಿ’ ಶೀರ್ಷಿಕೆಯಡಿ ರಚಿಸಿರುವ ಈ ಕೃತಿಯು ‘ಯುದ್ಧ ಮತ್ತು ಶಾಂತಿ’ ಕಾದಂಬರಿಯ ಒಟ್ಟು ಸ್ವರೂಪವನ್ನು ಚಿತ್ರಿಸುತ್ತದೆ. ಯುದ್ಧ ಮತ್ತು ಶಾಂತಿ- ಸುದೀರ್ಘವಾದ ಮತ್ತು ಸರಣಿ ರೂಪದ ಈ ಬೃಹತ್ ಕಾದಂಬರಿ ಓದುವುದಕ್ಕೂ ಮುನ್ನ ಈ ಕೃತಿಯು ಓದಿಗೆ ಉತ್ತಮ ಪೀಠಿಕೆ ಹಾಕುತ್ತದೆ.
©2025 Book Brahma Private Limited.