ಸರ್ವಜ್ಞನ ತ್ರಿಪದಿಗಳ ಅರ್ಥವಂತಿಕೆಯನ್ನು ಈ ಕೃತಿಯಲ್ಲಿ ನೀಡಿದ್ದಾರೆ ಲೇಖಕ ರಮೇಶಬಾಬು ಯಾಳಗಿ. ಸರ್ವಜ್ಞನ ಹುಟ್ಟಿನ ಬಗೆ, ಜನಮಾನಸದಲ್ಲಿ ನೆಲೆ ನಿಂತ ಬಗೆ, ಅವರು ಜನರಿಗೆ ಮಾಡಿದ ಘನಕಾರ್ಯಗಳೇನು ಎಂಬುದನ್ನು ವಿವರಿಸಿದ್ದಾರೆ. ಸರ್ವಜ್ಞನ ತ್ರಿಪದಿಗಳಲ್ಲಿ ವ್ಯಕ್ತಗೊಂಡ ಸತ್ಯಸಂಧತೆ, ಗುರುವಿನ ಮಹತ್ವ, ಜಾತ್ಯತೀತ ಮನೋಭಾವ, ವಿದ್ಯೆಯ ಮಹತ್ವ, ತ್ಯಾಗಬುದ್ದಿ, ವೇಶ್ಯಾವೃತ್ತಿ, ಕಾಯಕ ಪ್ರಜ್ಞೆ- ಹೀಗೆ ಅನೇಕ ವಿಷಯಗಳ ಕುರಿತು ವಿಶ್ಲೇಷಿಸಿದ್ದಾರೆ.
ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...
READ MORE