‘ಅಂಬೇಡ್ಕರ್ ಭಾರತ’ ಲೇಖಕ ಎಚ್.ಟಿ. ಪೋತೆ ಅವರ ಕೃತಿ. ಇಲ್ಲಿ ಅಂಬೇಡ್ಕರ್ ಚಿಂತನೆ ಹಾಗೂ ಅವರ ಸಮಕಾಲೀನರ ಚಿಂತನೆಗಳನ್ನು ತೌಲನಿಕವಾಗಿ ಅಭ್ಯಾಸ ಮಾಡಲಾಗಿದೆ. ಅಂಬೇಡ್ಕರ್ ಪೂರ್ವ ಭಾರತ, ಅಂಬೇಡ್ಕರ್ ಭಾರತ ಹಾಗೂ ಅಂಬೇಡ್ಕರೋತ್ತರ ಭಾರತದ ಕುರಿತು ವ್ಯಾಪಕ ಚರ್ಚೆಗಳಿವೆ. ವ್ಯಾಪಕ ಓದು, ತರ್ಕ ಬದ್ಧ ಹಾಗೂ ವಸ್ತು ನಿಷ್ಠ ವಿಶ್ಲೇಷಣೆ, ನಿರರ್ಗಳವಾದ ಭಾಷಾ ಬಳಕೆ, ಗೊಂದಲ ರಹಿತ ನಿರೂಪಣೆ ಎಲ್ಲವೂ ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ದಲಿತ ಲೋಕದ ತಲ್ಲಣಗಳನ್ನು ವಿಭಿನ್ನ ದೃಷ್ಠಿಕೋನದಿಂದ ಚರ್ಚಿಸಿರುವುದು ಈ ಪುಸ್ತಕದ ಮತ್ತೊಂದು ವಿಶೇಷ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2017ನೇ ಸಾಲಿನ ಪುಸ್ತಕ ಬಹುಮಾನ ಲಭಿಸಿದೆ.
©2025 Book Brahma Private Limited.