ಸರಹಪಾದ

Author : ಎಸ್. ನಟರಾಜ ಬೂದಾಳು

Pages 140

₹ 100.00




Year of Publication: 2017
Published by: ಗೋಧೂಳಿ ಪ್ರಕಾಶನ
Address: ನಂ.35, ಗೋಧೂಳಿ, 5ನೆ ಅಡ್ಡರಸ್ತೆ, ಸಿಂಡಿಕೇಟ್ ಬಡಾವಣೆ, ತುಂಗಾನಗರ, ಬೆಂಗಳೂರು-91

Synopsys

ಭಾರತದ ಸಿದ್ಧಪರಂಪರೆಯಲ್ಲಿ ಬರುವ ಮೊದಲ ಹೆಸರು ಸರಹಪಾದನದು. ಅವನನ್ನು ಬೌದ್ಧ ಮಹಾಸಿದ್ಧನೆಂದೂ, ತಂತ್ರಯಾನದ ಆಚಾರ್ಯನೆಂದೂ, ಸಹಜಯಾನದ ಗುರುವೆಂದೂ ಸಿದ್ಧರ ಸಿದ್ಧನೆಂದೂ, ಔರಾಸೀ ಸಿದ್ಧಪರಂಪರೆಯ ಆದಿ ಸಿದ್ಧನೆಂದೂ ಗುರುತಿಸಲಾಗುತ್ತದೆ. ಸರಹಪಾದ ಒಬ್ಬ ಬೌದ್ಧ ಮಹಾಸಿದ್ಧ. ಬೌದ್ಧ ವಜ್ರಯಾನದ ಮಹಾಗುರು. ಎಲ್ಲವನ್ನೂ ದಾಟಿದ ಸಹಜಯಾನವನ್ನು ಪ್ರವರ್ತಿಸಿದವನು. ಸರಹ ಮಹಾ ಬಂಡಾಯಗಾರ. ತನ್ನ ಕಾಲದ ಎಲ್ಲ ಅರ್ಥಹೀನ ಸಾಂಪ್ರದಾಯಿಕ ನಡೆಗಳನ್ನು ಗೇಲಿ ಮಾಡಿದ್ದಾನೆ. ನೈಸರ್ಗಿಕ ಬದುಕಿಗೆ ಮಹತ್ವ ಕೊಟ್ಟದ್ದು ಅವನ ಪ್ರಮುಖ ಕೊಡುಗೆ. ನಿರುಮ್ಮಳವಾಗಿ ಬಾಲರಂತಿರಲು ಸಾಧ್ಯವಾಗುವುದಾದರೆ ಅದು ಮಹಾಸಾಧನೆ ಎನ್ನುತ್ತಾನೆ. ಆದರೆ ಅದು ಕೇವಲ ಬಾಲಮುಗ್ಧತೆ ಅಲ್ಲ, ಪೂರ್ವಗ್ರಹಗಳಿಂದ ಮುಕ್ತವಾದ ಮನಸ್ಥಿತಿ. ಸರಹನ ದೋಹೆಗಳು ಅಪಭ್ರಂಶ ಭಾಷೆಯಲ್ಲಿವೆ. ಅವು ಅಲ್ಲಲ್ಲಿನ ಸ್ಥಳೀಯ ಮಟ್ಟುಗಳನ್ನು ಅನ್ವಯಿಸಿಕೊಂಡ ಹಾಡಿನ ರೂಪದ ರಚನೆಗಳು, ಕನ್ನಡದ ತತ್ವಪದಗಳ ಹಾಗೆ. ಬುದ್ಧಗುರು ನಾಗಾರ್ಜುನನ ಗುರುವಾಗಿದ್ದ ಸರಹಪಾದನ ಬರವಣಿಗೆಯನ್ನು ಕನ್ನಡಕ್ಕೆ ತರುವ ಅಪರೂಪದ ಪ್ರಯತ್ನ ಈ ಪುಸ್ತಕದಲ್ಲಿದೆ. ಸರಹಪಾದನ ದೋಹಾಲಂಕಾರ ಪುಷ್ಟ ಮತ್ತು ದೋಹಾಕೋಶನಾಮ ಚರ್ಯಾಗೀತೆ, ವಜ್ರಗೀತೆಗಳ ಕನ್ನಡ ರೂಪ ಈ ಪುಸ್ತಕ ಹಾಡಿನ ರೂಪದಲ್ಲಿನ ಮೂಲ ದೋಹೆಗಳನ್ನು ಮಾತಾಗಿಸಿ ಕನ್ನಡಕ್ಕೆ ತರಲಾಗಿದೆ. ಅಭ್ಯಾಸಪೂರ್ಣ ಪ್ರಸ್ತಾವನೆ ಮತ್ತು ಆಕರಗ್ರಂಥ ಸೂಚಿಗಳು ಈ ಪುಸ್ತಕದ ಮಹತ್ವ ಹೆಚ್ಚಿಸಲು ಕಾರಣವಾಗಿವೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books