ಸಂಸ್ಕೃತ, ಹಳಗನ್ನಡ, ಆಧುನಿಕ ಸಾಹಿತ್ಯ, ಸಂಗೀತ, ಯಕ್ಷಗಾನ ಹೀಗೆ ಹಲವು ವಿಷಯಗಳ ಬಗೆಗೆ ನಿಂತ ನಿಲುವಿನಲ್ಲಿ ಮಾತನಾಡಬಲ್ಲ, ಚಿಂತಿಸಬಲ್ಲ, ಬರೆಯಬಲ್ಲ ಹೊಸತಲೆಮಾರಿನ ಲೇಖಕ ಶ್ರೀಧರ ಹೆಗಡೆ ಭದ್ರನ್. ಕನ್ನಡ ಪರಂಪರೆ, ಸಂಪ್ರದಾಯದ ಅರಿವು, ಆಧುನಿಕ ವಿಚಾರ, ಚಿಂತನಕ್ರಮಗಳ ಬಗೆಗೆ ಆಸಕ್ತಿ, ಸಾಮಾಜಿಕ ಪಲ್ಲಟಗಳನ್ನು, ಧಾರ್ಮಿಕ ಪ್ರಕ್ರಿಯೆಗಳನ್ನು ವಿವೇಕಯುತವಾಗಿ ನೋಡುವ ಜಾಣೆ, ಅಷ್ಟೆ ವಿನಯವಂತಿಕೆಯ ವ್ಯಕ್ತಿತ್ವ ಶ್ರೀಧರ್ ಅವರದು.
ಶ್ರೀಧರ ಅವರು ತಮ್ಮ ಪಿಎಚ್.ಡಿ. ಸಂಶೋಧನೆಗಾಗಿ ಸಿದ್ಧಪಡಿಸಿದ ’ಆಧುನಿಕ ಕನ್ನಡ ಮಹಾಕಾವ್ಯ’ ಮಹಾಪ್ರಬಂಧ. ಕುವೆಂಪು ಅವರ ’ಶ್ರೀರಾಮಾಯಣ ದರ್ಶನಂ’, ವಿ.ಕೃ.ಗೋಕಾಕ್ ಅವರ ’ಭಾರತ ಸಿಂಧುರಶ್ಮಿ’, ಸಂ.ಶಿ. ಭೂಸನೂರುಮಠ ಅವರ ’ಭವ್ಯಮಾನವ’ ಸೇರಿದಂತೆ 20ನೇ ಶತಮಾನದಲ್ಲಿ ರಚನೆಯಾಗಿ ಪ್ರಕಟಗೊಂಡ ಮಹಾಕಾವ್ಯಗಳನ್ನು ಶ್ರೀಧರ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಶ್ರೀಧರ ಅವರ ಓದು-ಒಳನೋಟಗಳಿಗೆ ಈ ಪುಸ್ತಕ ಸಾಕ್ಷಿಯಾಗಿದೆ.
©2024 Book Brahma Private Limited.