ಡಾ. ಮಾದುಪ್ರಸಾದ್ ಹುಣಸೂರು ಅವರ ಕೃತಿ-ಮಕ್ಕಳ ಕಥಾ ಸಾಹಿತ್ಯ: ಸ್ವರೂಪ ಮತ್ತು ತಾತ್ವಿಕತೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕಥೆಗಳನ್ನು ವಿಶ್ಲೇಷಿಸಿ, ಅದರ ತಾತ್ವಿಕತೆಯನ್ನು ವ್ಯಾಖ್ಯಾನಿಸಿರುವ ಬರೆಹಗಳು ಈ ಕೃತಿಯಲ್ಲಿ ಒಳಗೊಂಡಿವೆ.
ಡಾ. ಮಾದುಪ್ರಸಾದ್ ಹುಣಸೂರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದವರು. ತಂದೆ ಕುಂಡಯ್ಯ, ತಾಯಿ ಕಾಳಮ್ಮ. ಜನನ 1982ರ ಮಾರ್ಚ್ 20 ರಂದು. ಪ್ರಾಥಮಿಕ ಶಿಕ್ಷಣ-ಹುಟ್ಟೂರಿನಲ್ಲಿ, ಮಾಧ್ಯಮಿಕ ಶಿಕ್ಷಣ-ಬೋಳನಹಳ್ಳಿಯಲ್ಲಿ, ಪ್ರೌಢಶಾಲಾ ಶಿಕ್ಷಣ-ಅರಸಿ ಹುಣಸೂರಿನಲ್ಲಿ ನಡೆಯಿತು. ಮೈಸೂರಿನ ವಸಂತ ಮಹಲ್ ನಲ್ಲಿ ಶಿಕ್ಷಕ ತರಬೇತಿ ಪಡೆದು, 2004 ರಲ್ಲಿ ಪಿರಿಯಾಪಟ್ಟಣದ ಭೂತನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಕೃತಿಗಳು: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಮಕ್ಕಳ ಕಥಾ ಸಾಹಿತ್ಯ ಸ್ವರೂಪ: ತಾತ್ವಿಕತೆ ' ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿ.ಎಚ್.ಡಿ, ಎಂ.ಎಸ್. ಪುಟ್ಟಣ್ಣರ ಮಕ್ಕಳ ಸಾಹಿತ್ಯದ ಕೊಡುಗೆ ಎಂಬುದು ಸಂಶೋಧನಾ ಗ್ರಂಥ ಪ್ರಕಟಣೆ, ‘ಹಾಡೋಣ ಬಾರೋ ಕಿಶೋರ, 'ಬೆಂದವರ ಬೆವರು, ಹಕ್ಕಿಗಾನ ...
READ MORE