ಲೇಖಕ ಶೇಷ ನವರತ್ನ ಅವರು ಕೃತಿ-ಋಗ್ವೇದ. ಭಾರತೀಯ ಪ್ರಾಚೀನ ಸಾಹಿತ್ಯದ ಭಾಗವಾಗಿ ವೇದಗಳನ್ನು ನೋಡಬಹುದು. ಆ ಪೈಕಿ ಋಗ್ವೇದವು ಜ್ಞಾನದೇವತೆಯಾದ ಸರಸ್ವತಿಯ ಪೂಜೆಯ ಮಹತ್ವ ಹಾಗೂ ಫಲಗಳ ಕುರಿತು ವಿವರಣೆ ನೀಡುತ್ತದೆ. ಸರಸ್ವತಿಯ ಮೂಲ ಹುಟ್ಟನ್ನು ಋಗ್ವೇದ ತಿಳಿಸುತ್ತದೆ. ನವರಾತ್ರಿಯ ದಿನದಂದು ಸರಸ್ವತಿ ಪೂಜೆ ಏಕೆ? ಎಂಬುದಕ್ಕೆ ವಿಜಯದಶಮಿ ದಿನ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಮಗುವು ‘ಬುದ್ಧಿವಂತ’ ಆಗುತ್ತದೆ ಎಂಬ ನಂಬಿಕೆ. ಉಪಕರ್ಮ ಎಂದರೆ ಆರಂಭ. ಕಾರ್ಯಗಳ ಉತ್ತಮ ಆರಂಭಕ್ಕೆ ಈ ಉಪಕರ್ಮಗಳನ್ನು ಮಾಡಬೇಕು ಎಂಬ ವಿಧಿ-ವಿಧಾನಗಳು ಸಹ ಋಗ್ವೇದಗಳಲ್ಲಿದೆ. ಇಂತಹ ವಿಚಾರ-ಆಚರಣೆಗಳ ವಿವರಗಳಿರುವ ಕೃತಿ ಇದು.
©2025 Book Brahma Private Limited.