ಯಾವುದೇ ಸಾಹಿತ್ಯದ ಮೇಲೆ ಸಮಕಾಲೀನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಭಾವ ಬೀರುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಸಂವಿಧಾನ ಶಿಲ್ಪಿ , ಅತ್ಯದ್ಭುತ ಮಾನವತಾವಾದಿ ಅಂಬೇಡ್ಕರ್ ವಿಚಾರದಲ್ಲೂ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಶೋಷಿತ, ದಮನಿತ ಸಮುದಾಯಗಳ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಚಿಂತನೆ ದೇಶವನ್ನೇ ಪ್ರಭಾವಿಸಿಕೊಂಡಿದೆ. ಇದಕ್ಕೆ ಕನ್ನಡ ಸಾಹಿತ್ಯ ಹೊರತಾದುದಲ್ಲ, ಯಾಕೆಂದರೆ ಕನ್ನಡ ಸಾಹಿತ್ಯದ ಮೇಲೂ ಅಂಬೇಡ್ಕರ್ ಪ್ರಭಾವ ಬೀರಿದೆ. ಕವಿಯತ್ರಿ ಡಾ. ಅನಸೂಯ ಕ. ಕಾಂಬಳೆ ಯವರು ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಬೀರಿದ ಪ್ರಭಾವವನ್ನು ಕೃತಿಯಲ್ಲಿ ದಾಖಲು ಮಾಡಿದ್ದಾರೆ.
©2025 Book Brahma Private Limited.