‘ಗಿರಿನಾಡು ಸೂಫಿ ಪರಂಪರೆ’ ಯಾದಗಿರಿ ಜಿಲ್ಲೆಯ ಸೂಫಿಗಳ ಕುರಿತ ಪುಸ್ತಕ. ಸೂಫಿ ದಾರ್ಶನಿಕತೆ ಸ್ಥಳೀಯವಾಗಿ ಚಿಗುರೊಡೆದ, ಹೊಸ ಪರಿವರ್ತನೆಗಳನ್ನು ಮೈಗೂಡಿಸಿಕೊಂಡ, ಸ್ಥಳೀಯ ಸಂಸ್ಕೃತಿ ಮತ್ತು ಸಮುದಾಯಗಳನ್ನು ಪ್ರಭಾವಿಸಿದ ಬಗೆಯನ್ನು ಈ ಕೃತಿಯಲ್ಲಿ ಅರ್ಥಪೂರ್ಣವಾಗಿ ದಾಖಲಿಸಲಾಗಿದೆ.
ಎಲ್ಲ ಬಗೆಯ ಮತೀಯ ರಾಜಕಾರಣಕ್ಕೆ ಮದ್ದು ಅರೆಯುವಂತಿರುವ ಸೂಫೀತತ್ವಗಳು ಯಾದಗಿರಿ ಜಿಲ್ಲೆಯಲ್ಲಿ ಮೊಳಕೆಯೊಡೆದ ಬಗೆ, ಅದಕ್ಕೆ ಅಗತ್ಯವಿದ್ದ ಹಿನ್ನೆಲೆ, ಅನುಭಾವಿ ಶಾಖೆಯೊಂದರ ಸಮರ್ಥ ಅಭಿವ್ಯಕ್ತಿಯನ್ನು ಇಲ್ಲಿ ಕಾಣಬಹುದು. ಕನ್ನಡದಲ್ಲಿ ಸೂಫಿ ಅನುಭಾವದ ಅಂಬರವನ್ನು ವಿಸ್ತರಿಸಿದ ಅಗ್ಗಳಿಕೆಗೂ ಕೃತಿ ಪಾತ್ರವಾಗಿದೆ.
©2025 Book Brahma Private Limited.