ಲೇಖಕ ಜಿ.ಕೆ. ಕುಲಕರ್ಣಿ ಅವರು ಸರ್ವಜ್ಞನ ತ್ರಿಪದಿಗಳನ್ನು ತಮ್ಮದೇ ದೃಷ್ಟಿಕೋನದಿಂದ ವ್ಯಾಖ್ಯಾನಿಸಿ, ವಿಶ್ಲೇಷಿಸಿದ ಕೃತಿ-ಸರ್ವಜ್ಞವಾಣಿ. ಕಿರಿದಾದ ಪದಗಳ ಮೂಲಕ ಹಿರಿದಾದ ಅರ್ಥವನ್ನು ಸ್ಫುರಿಸಿ, ಬದುಕಿನ ಪ್ರೀತಿಯನ್ನು ಹೆಚ್ಚಿಸುವ ಸರ್ವಜ್ಞನ ತ್ರಿಪದಿಗಳನ್ನು ವ್ಯಾಖ್ಯಾನಿಸುವುದೆಂದರೆ ಬದುಕೇ ಆಗಿದೆ. ಬದುಕಿನ ಸ್ವರೂಪ-ಸ್ವಭಾವ ಎರಡನ್ನೂ ಪೂರ್ಣವಾಗಿ ತಿಳಿದು, ಅಧ್ಯಾತ್ಮವನ್ನೂ ಅಂದರೆ ಬದುಕಿನ ನೈಜತೆ ಹಾಗೂ ಸಾರ್ಥಕತೆಯನ್ನು ತಿಳಿಸುವುದು ತ್ರಿಪದಿಗಳ ಉದ್ದೇಶ. ತ್ರಿಪದಿಗಳ ಜೀವಾಳವನ್ನು ತೀರಾ ಸರಳವಾಗಿ ವ್ಯಾಖ್ಯಾನಿಸಿ, ತಮ್ಮದೇ ಆರ್ಥ ನೀಡಿದ್ದಾರೆ.
©2024 Book Brahma Private Limited.