ಸಾಹಿತ್ಯ ಕ್ಷೇತ್ರದಲ್ಲಿ ಸಂಶೋಧನೆಯ ಕೆಲಸ ಮಾಡುವವರನ್ನು ಮತ್ತು ಹೊಸದಾಗಿ ಸಂಶೋಧನೆಗೆ ತೊಡಗಿಸಿಕೊಳ್ಳುವವರನ್ನೇ ಉದ್ದೇಶವಾಗಿಟ್ಟು ರಚಿಸಿದ ಕೃತಿ. ಸಂಶೋಧನೆ, ಸ್ವರೂಪ, ಸಂಶೋಧನೆಯ ಕೈಗೊಳ್ಳುವ ವಿಧಾನ, ಎದುರಾಗುವ ಸಮಸ್ಯೆಗಳ ಬಗ್ಗೆ ಜಿಜ್ಞಾಸೆ ನಡೆಸಲಾಗಿದೆ. ಈ ಗ್ರಂಥದಲ್ಲಿ ಒಟ್ಟು ಎಂಟು ಪ್ರಕರಣಗಳಿವೆ. ಮೊದಲನೆಯ ‘ಆರಂಭ’ ಪ್ರಕರಣದಲ್ಲಿ ಬದಲಾಗುತ್ತಿರುವ ಸಾಹಿತ್ಯದ ಚಹರೆ, ಸಾಹಿತ್ಯ-ಆಕರ- ಪಠ್ಯ, ಸಂಶೋಧನೆಯ ಸ್ವರೂಪ, ವಿಧಾನ-ದೃಷ್ಟಿಕೋನ, ಸಂಶೋಧನೆಗಳ ಚರಿತ್ರೆ, ಸಂಶೋಧನ- ವಿಮರ್ಶೆ ಬಗ್ಗೆ ಚರ್ಚಿಯಿದೆ. ಎರಡನೇ ಪ್ರಕರಣ ಸಿದ್ಧತೆ ಕುರಿತಾದರೆ, ಮೂರನೇ ಪ್ರಕರಣ ತೊಡಗು’ವಿಕೆಗೆ ಸಂಬಂಧಿಸಿದ್ದು. ನಾಲ್ಕನೆಯ ಪ್ರಕರಣದಲ್ಲಿ ತೊಡಕು, ಐದನೆಯ ಪ್ರಕರಣದಲ್ಲಿ ಸವಾಲು, ಆರನೇ ಪ್ರಕರಣದಲ್ಲಿ ಗಮನ, ಏಳನೆಯ ಪ್ರಕರಣದಲ್ಲಿ ಮಂಡನೆ, ಎಂಟನೆಯ ಪ್ರಕರಣದಲ್ಲಿ ಪರೀಕ್ಷೆ ಕುರಿತು ವಿವರವಾಗಿ ಚರ್ಚೆ ನಡೆಸಲಾಗಿದೆ. ಸಂಶೋಧನೆಯಲ್ಲಿ ಕೈಗೊಳ್ಳ ಬಯಸುವವರಿಗೆ ಇದೊಂದು ಕೈಪಿಡಿ.
ಈ ಪುಸ್ತಕವು 2007ರಲ್ಲಿ ಮೊದಲ ಮುದ್ರಣ ಕಂಡಿತ್ತು.
©2025 Book Brahma Private Limited.