ಹಿರಿಯ ಸಂಶೋಧಕ ಡಾ. ಎಂ.ಎಂ ಕಲಬುರ್ಗಿ ಅವರ ಸಂಶೋಧನಾ ಲೇಖನಗಳ ಎರಡನೆಯ ಸಂಪುಟ. ಸಂಪುಟದದಲ್ಲಿ ಶಾಸನ ಮಾರ್ಗ, ಜಾನಪದ ಮಾರ್ಗ, ಶಾಸ್ತ್ರಮಾರ್ಗ ಎಂಬ ಮೂರು ಮಾರ್ಗಗಳಿವೆ. ಶಾಸನ ಮಾರ್ಗವು, ಶಾಸನ ಪಠ್ಯಗಳ ಓದು, ಹೊಸಓದು, ಸರಿಓದು ಕಟ್ಟಿಕೊಡುವ ಹೊಸ ವಿಚಾರ, ಪ್ರಾಚೀನ ಕಾವ್ಯಗಳ ಶಾಸನೋಕ್ತ ಪದ್ಯಗಳ ಚರ್ಚೆ, ಕವಿಗಳು ಪಡೆದ ದತ್ತಿಗ್ರಾಮಗಳ ವಿಚಾರ, ಶಾಸನ ಕವಿಗಳು ಹಾಗೂ ಲಿಪಿಕಾರರು, ಶಾಸನಗಳ ಭಾಷೆ, ಪರಿಭಾಷೆ, ಲಿಪಿ, ಛಂದಸ್ಸು, ಪಾಠಪರಿಷ್ಕರಣ, ಹೊಸ ಶಾಸನಗಳ ಶೋಧ, ವೀರಶೈವ ಪೀಠಪರಂಪರೆ, ಬಾಬಾನಗರ ಹಾಗೂ ವಿಜಾಪುರದಲ್ಲಿ ಕವಿ ನಾಗಚಂದ್ರ ಕಟ್ಟಿಸಿರುವ ಬಸದಿಗಳು ಸೇರಿದಂತೆ ವಿವಿಧ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ.
'ಜಾನಪದ ಮಾರ್ಗವು' ಕೆಲವು ಜಾನಪದ ಆಚರಣೆ, ಜಾನಪದ ದೇವತೆಗಳು, ಜಾನಪದ ಅಧ್ಯಯನ, ಜಾನಪದ ಕ್ರೀಡೆ, ಪ್ರಾಂತಭೇದ, ಜಾನಪದ ಬಯಲಾಟಗಳು, ಜಾನಪದ ಸಾಹಿತ್ಯ ಸಂಪಾದನೆ, ಮಾರ್ಗ ಸಾಹಿತ್ಯ, ಜನಪದ ಸಾಹಿತ್ಯಗಳ ವೈಲಕ್ಷಣ್ಯಗಳ ಕುರಿತ ಶೋಧಗಳನ್ನು ಕಟ್ಟಿಕೊಡುತ್ತದೆ.
'ಶಾಸ್ತ್ರಮಾರ್ಗವು' ಮುಖ್ಯವಾಗಿ ಸ್ಠಳನಾಮ, ಗ್ರಾಮನಾಮ, ಅಡ್ಡಹೆಸರು, ವ್ಯಾಕರಣ, ಛಂದಸ್ಸು, ಹಸ್ತಪ್ರತಿ, ಗ್ರಂಥ ಸಂಪಾದನೆ, ಕ್ಷೇತ್ರಕಾರ್ಯ, ಇಂಗ್ಲೆಂಡದಲ್ಲಿಯ ಕನ್ನಡ ಹಸ್ತಪ್ರತಿ ಮುಂತಾದ ವಿಷಯಗಳನ್ನು ಪ್ರಸ್ತಾಪಿಸುತ್ತದೆ.
ಈ ಗ್ರಂಥವನ್ನು ಮೊದಲ ಬಾರಿಗೆ 1988ರಲ್ಲಿ ನರೇಶ & ಕಂಪನಿ, ಬೆಂಗಳೂರು ಪ್ರಕಟಿಸಿತ್ತು. ನಂತರದ ಆವೃತ್ತಿಯನ್ನು ಸ್ವಪ್ನ ಬುಕ್ ಹೌಸ್, ಬೆಂಗಳೂರು ಪ್ರಕಟಿಸಿದೆ.
©2024 Book Brahma Private Limited.