ಎ.ಆರ್. ಕೃಷ್ಣಶಾಸ್ತ್ರಿ ಅವರು ಬರೆದ ಕೃತಿ-ಸಂಸ್ಕೃತ ನಾಟಕ. ಕೃತಿಯ ಪ್ರಧಾನ ಸಂಪಾದಕರು-ಬಿ.ಎಂ. ಶ್ರೀಕಂಠಯ್ಯ. ಸಾಹಿತ್ಯಾಸಕ್ತರು ಮೊದಲು ಸಂಸ್ಕೃತ, ಗ್ರೀಕ್ ಹಾಗೂ ಇಂಗ್ಲಿಷ್ ಭಾಷೆಯ ನಾಟಕಗಳ ಬಗ್ಗೆ ತಿಳಿಯಬೇಕು ಎಂದು ಸಲಹೆ ನೀಡುವ ಪ್ರಧಾನ ಸಂಪಾದಕರು, ನಾಟಕದ ವಸ್ತು- ವಿಷಯ, ವಿಮರ್ಶೆ, ನಾಟಕದ ವಾಹಕ, ಆಕಾರ, ಸ್ವರೂಪ ಇತ್ಯಾದಿ ಕುರಿತು ಸುದೀರ್ಘವಾದ ಮುನ್ನುಡಿ ಬರೆದಿದ್ದು, ಅಧ್ಯಯನಪೂರ್ಣವಾಗಿದೆ.
ಲೇಖಕ ಎ.ಆರ್. ಕೃಷ್ಣಶಾಸ್ತ್ರಿ, ಸುಮಾರು 1ನೇ ಶತಮಾನ ಕಾಲದಿಂದಲೂ ಸಂಸ್ಕೃತ ಭಾಷೆಯಲ್ಲಿ ನಾಟಕಗಳನ್ನು ರಚಿಸಿರುವ ಇತಿಹಾಸವಿದೆ ಎಂದು ಹೇಳಿದ್ದು, ಕೃತಿಯಲ್ಲಿ ಸಂಸ್ಕೃತ ನಾಟಕದ ಸ್ವರೂಪ ಮತ್ತು ಉತ್ಪತ್ತಿ (ನಾಟ್ಯ ಲಕ್ಷಣ, ಭೇದ ಇತ್ಯಾದಿ) ಉಚ್ಛ್ರಾಯ ಕಾಲ (ಅಶ್ವಘೋಷ, ಭಾಸ, ಶೂದ್ರಕ, ಕಾಳಿದಾಸ, ವಿಶಾಖದತ್ತ ಇತ್ಯಾದಿ), ಮಧ್ಯಕಾಲ (ಹರ್ಷವರ್ಧನ, ಭವಭೂತಿ, ಭಟ್ಟ ನಾರಾಯಣ, ಕ್ಷೇಮೀಶ್ವರ, ಕೃಷ್ಣಮಿತ್ರ, ರಾಜಶೇಖರ ಇತ್ಯಾದಿ), ಕ್ಷೀಣಕಾಲ; ಈಚಿನ ರೂಪಕಗಳು ಮತ್ತು ಉಪರೂಪಕಗಳ ಬಗ್ಗೆ (ರಾಮಾಯಣ, ಭಾಗವತ, ಪೌರಾಣಿಕ, ಚರಿತ್ರೆ, ಧಾರ್ಮಿಕ, ಛಾಯಾ ವೇಗದ ನಾಟಕಗಳು ಹಾಗೂ ಸಂಕೀರ್ಣ ವೇಗದ ನಾಟಕಗಳು ಇತ್ಯಾದಿ) ಇಲ್ಲಿ ಚರ್ಚಿಸಲಾಗಿದೆ. ಭಾರತದಲ್ಲಿ ಬೆಳೆದು ಬಂದ ನಾಟಕಗಳ ಪರಂಪರೆಯನ್ನು ಈ ಕೃತಿ ಸಂಶೋಧನಾತ್ಮಕವಾಗಿ ಕಟ್ಟಿಕೊಡುತ್ತದೆ.
©2024 Book Brahma Private Limited.