ಕನ್ನಡ ಭಾಷೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳುವ ಯತ್ನ ಕೃತಿಯದ್ದು. ಹಿರಿಯ ವಿದ್ವಾಂಸರಾದ ಪ್ರೊ. ಎಂ.ಎಚ್. ಕೃಷ್ಣಯ್ಯ ಕೃತಿಯ ಲೇಖಕರು. ಪುಸ್ತಕದ ಮೊದಲ ಆರು ಅಧ್ಯಾಯಗಳನ್ನು ಭಾಷೆಯ ಅಧ್ಯಯನಕ್ಕೆ ಅಗತ್ಯವಾದ ಹಿನ್ನೆಲೆಯಲ್ಲಿ ರೂಪಿಸಲಾಗಿದೆ. ಕನ್ನಡ ಭಾಷೆ ಹಂತ ಹಂತವಾಗಿ ಅರಳಿದ ಬಗೆಯನ್ನು ಈ ಭಾಗ ಹೇಳುತ್ತದೆ. ಉಳಿದುದರಲ್ಲಿ ಲಿಪಿ, ಶಬ್ಧ, ವ್ಯಾಕರಣ ಹೀಗೆ ಭಾಷೆಯ ಎಲ್ಲಾ ಅಂಗಗಳ ಬೆಳವಣಿಗೆಯನ್ನು ಶಾಸ್ತ್ರೀಯವಾಗಿ ಚಾರಿತ್ರಿಕ ದೃಷ್ಟಿಯಿಂದ ವಿಶ್ಲೇಷಿಸಲಾಗಿದೆ.
ಕೃಷ್ಣಯ್ಯ ಅವರು ಕೃತಿಯ ಬಗ್ಗೆ ಪ್ರಸ್ತಾಪಿಸುತ್ತಾ ಸಂಕ್ಷಿಪ್ತವಾಗಿ, ಸರಳವಾಗಿ ಕನ್ನಡ ಭಾಷೆ ನಡೆದುಬಂದ ದಾರಿಯ ಬಗ್ಗೆ, ಅಸ್ತಿತ್ವವನ್ನು ವೈಶಿಷ್ಟ್ಯಗಳನ್ನು ಪಡೆದುಕೊಂಡ ಬಗ್ಗೆ, ಸ್ವರೂಪ ವರ್ತನೆ ಬದಲಾವಣೆಗಳ ಹಲವು ಮಜಲು ಮಗ್ಗಲುಗಳ ಬಗ್ಗೆ ಪರಿಚಯ ಮಾಡಿಕೊಡುವುದು ಉದ್ದೇಶ. ಕನ್ನಡ ಭಾಷೆಯನ್ನು ವಿಶೇಷ ಅಧ್ಯಯನ ವಿಷಯವಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ, ಕುತೂಹಲ ಆಸಕ್ತಿಯುಳ್ಳ ಸಾಮಾನ್ಯ ಓದುಗರಿಗೆ ಇದರಿಂದ ಅಲ್ಪಸ್ವಲ್ಪ ಪ್ರಯೋಜನವಾಗುವುದಾದರೆ ನನ್ನ ಶ್ರಮ ಸಾರ್ಥಕ’ ಎಂದಿದ್ದಾರೆ.
©2024 Book Brahma Private Limited.