ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಈ ಕೃತಿಯೂ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಿದ್ಧಪಡಿಸಿದ ಪ್ರೌಢ ಪ್ರಬಂಧವಾಗಿದೆ.ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯವೆನ್ನುವುದು ವಿಶಿಷ್ಟ ಪ್ರಕಾರವಾಗಿದೆ. ಸುಮಾರು ಒಂದು ಶತಮಾನದಷ್ಟು ಹಳೆಯದಾದ ಈ ಪ್ರಕಾರದಲ್ಲಿ ಇದುವರೆಗೆ ಸುಮಾರು 600 ಕೃತಿಗಳು ಮೂಡಿಬಂದಿದೆ. ಬಿ.ಟಿ. ಅನುರಾಧ ರವರ ಈ ಕೃತಿ ಪ್ರವಾಸ ಸಾಹಿತ್ಯದ ಕೇವಲ ಸಾಹಿತ್ಯಿಕ ವಿಮರ್ಶೆ ಮಾತ್ರವಲ್ಲದೆ ಅದರ ಅಂತರಂಗವನ್ನು ಪ್ರವೇಶಿಸಿ ಸಾಂಸ್ಕೃತಿಕವಾಗಿ ಅವುಗಳ ಮಹತ್ವ, ಪ್ರಾಮುಖ್ಯತೆ ಏನು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತದೆ.
©2024 Book Brahma Private Limited.