ಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕುರಿತ ಟಿಪ್ಪಣಿಗಳಿರುವ ಕೃತಿ-‘ಚಿನ್ನಮ್ಮನ ಲಗ್ನ- 1893’ ಲೇಖಕ ಕೆ. ಸತ್ಯನಾರಾಯಣ ಅವರು ರಚಿಸಿದ್ದು, ಪ್ರೊ. ಕೆ. ಸುಂದರರಾಜ್ ಅವರು ಬೆನ್ನುಡಿ ಬರೆದಿದ್ದಾರೆ. ಕನ್ನಡದ ಮಹತ್ವದ ಬರಹಗಾರ ಕೆ.ಸತ್ಯನಾರಾಯಣ ಅವರು ತಮ್ಮಿಷ್ಟದ ಲೇಖಕ ಕುವೆಂಪು ಅವರ - ಮಲೆಗಳಲ್ಲಿ ಮದುಮಗಳು ಕಾದಂಬರಿಯ ಓದಿಗಾಗಿ ತಾವು ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಕೃತಿಯಾಗಿ ಪ್ರಕಟಿಸಿದ್ದಾರೆ.
ಕುವೆಂಪು ಅವರ ಕಾದಂಬರಿಗಷ್ಟೇ ಅಲ್ಲದೇ ಈ ಕೃತಿಯು, ಸಾಹಿತ್ಯದ ಓದಿಗೂ ಒಂದು ಅತ್ಯುತ್ತಮ ಆಕರ ಗ್ರಂಥವಾಗುವುದರಲ್ಲಿ ಸಂದೇಹವಿಲ್ಲ. ಕಾದಂಬರಿಯ ಪ್ರತಿ ಅಧ್ಯಾಯವನ್ನೂ ಎಳೆ ಎಳೆಯಾಗಿ ತುಲನಾತ್ಮಕವಾಗಿ ಪರೀಕ್ಷಿಸಿ, ಕಾದಂಬರಿಯ ಸಂಕೀರ್ಣತೆಯನ್ನು ಎಲ್ಲಿಯೂ ಮರೆಯದೇ, ಆಳವಾಗಿ ಮತ್ತು ಸಮಗ್ರವಾಗಿ ಚಿಂತಿಸಿ, ಅತ್ಯಂತ ಸರಳ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ. ಈ ರೀತಿಯ ಪಠ್ಯ ಕೇಂದ್ರಿತವಾದ. ಯಾವ ಸಮಕಾಲೀನ ಥಿಯರಿಗಳ ಹಂಗೂ ಇಲ್ಲದ, ಸಾಹಿತ್ಯದ- ಕಾದಂಬರಿಯ ಮೇಲೆ ಹಾಗೂ ಒಟ್ಟಾರೆಯಾಗಿ ಕನ್ನಡದಲ್ಲಿ ಈವರೆಗೂ ಪ್ರಕಟವಾಗಿರುವ ಇಂತಹ ಬೃಹತ್ ಕಾದಂಬರಿಗಳ ಪ್ರಕಾರದ ಮೇಲೆಯೇ ಇಟ್ಟಿರುವ ನಂಬಿಕೆಯೂ ಅಪಾರ. ಕಾದಂಬರಿಯಿಂದಲೇ ಎಲ್ಲ ಓದನ್ನೂ ಸಾಧ್ಯಗೊಳಿಸಬಹುದಾದ ಈ ರೀತಿಯ ಓದು ವಿಶಿಷ್ಟವಾದದು.
‘ಚಿನ್ನಮ್ಮನ ಲಗ್ನ- 1893’ ಈ ಕೃತಿಯ ಕುರಿತು ಲೇಖಕ ಕೆ. ಸತ್ಯನಾರಾಯಣ ಅವರ ಮಾತು.
©2024 Book Brahma Private Limited.