‘ಇಳಾಭಾರತಂ’ ಲೇಖಕಿ ಧರಣಿದೇವಿ ಮಾಲಗತ್ತಿ ಅವರ ಕೃತಿ. ಈ ಕೃತಿಗೆ ಪುಂಡಲೀಕ ಹಾಲಂಬಿ ಅವರ ಅಧ್ಯಕ್ಷೀಯ ನುಡಿ ಹಾಗೂ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಪರಿಷತ್ತು ಪ್ರಕಟಿಸುತ್ತಿರುವ ಡಾ.ಧರಣೀದೇವಿ ಮಾಲಗತ್ತಿ ಅವರ ಇಳಾ ಭಾರತಂ ಒಂದು ವಿಶೇಷ ಕೃತಿ. ಮಹಾಭಾರತ ಹಾಗೂ ಇತರ ಪುರಾಣಗಳಿಂದ ಆಯ್ದ ಸ್ತ್ರೀ ಕಥಾನಕಗಳನ್ನು ಆಧರಿಸಿರುವ ಷಟ್ಪದಿ ಕಾವ್ಯವು ಒಂದು ಸಹಜ ನೆಲೆಗಟ್ಟಿನ ಮೇಲೆ ನಿರೂಪಿತವಾಗಿದೆ. ಭಾವುಕತೆಯ ಸೋಂಕಿಲ್ಲದೆ ನಿರುಮ್ಮಳವಾಗಿ ಸ್ರ್ತೀ ಹಾಗೂ ಪುರುಷ ಸಂವೇದನೆಗಳು ಅಭಿವ್ಯಕ್ತವಾಗಿವೆ. ಕವಯತ್ರಿ ಯಾವ ಪಕ್ಷವನ್ನ ವಹಿಸಿರುವುದಿಲ್ಲ ಎನ್ನುವುದೇ ಈ ಕಾವ್ಯದ ವಿಶೇಷ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2025 Book Brahma Private Limited.