ಸಾಹಿತಿ ಡಾ. ದೊಡ್ಡರಂಗೇಗೌಡ ಅವರ ಕೃತಿಸಾಹಿತ್ಯ ಸಿಂದೂರ. ಇದರಲ್ಲಿ ಸಂಸ್ಕೃತಿಯ ಹಿರಿಮೆ ಇದೆ; ಪ್ರಾದೇಶಿಕ ವೈಲಕ್ಷಣ್ಯದ ಗರಿಮೆ ಇದೆ; ಹಿರಿಯ ಕವಿಗಳ ಸಾಹಿತ್ಯ ಸುಧೆಯ ಸಾಹಿತ್ಯ ಪರಿಚಾರಿಕೆ ಇದೆ; ಅಭಿಜಾತ ಕೃತಿಗಳ ಅವಲೋಕನ ಇದೆ. ಪ್ರಾಚೀನರ ಕಾವ್ಯದರ್ಶನವಿದೆ; ಆಧುನಿಕರ ತನಿತನಿ ವಿಚಾರಧಾರೆ ಇದೆ. ಅನೇಕ ವಿದ್ವಾಂಸರ ವಿಚಾರಧಾರೆಗಳನ್ನುಳ್ಳ ಕೃತಿ ಇದು.
ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ದೊಡ್ಡರಂಗೇಗೌಡ ಅವರು, ತುಮಕೂರು ಜಿಲ್ಲೆ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ಜನಿಸಿದರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಇವರು, ‘ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದರು. ಬೆಂಗಳೂರಿನ ಎಸ್.ಎಲ್.ಎನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಲೇಜು ದಿನಗಳಲ್ಲೇ ಕವನ, ಕತೆ ರಚನೆಯಲ್ಲಿ ತೊಡಗಿಕೊಂಡಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕಾವ್ಯ, ವಿಮರ್ಶಾ ಕೃತಿಗಳು, ಭಾವಗೀತೆ ಹಾಗೂ ...
READ MORE