ಅಧ್ಯಯನ ಮತ್ತು ಸಂಶೋಧನೆಯ ಮೂಲಕ ತಾವು ಕಂಡುಕೊಂಡ ಅಂಶಗಳನ್ನು ಲೇಖಕರು ದಾಖಲಿಸಿದ್ದಾರೆ. ಸಂಗಂ ಸಾಹಿತ್ಯದ ಜನಪದೀಯತೆ ಮತ್ತು ಕನ್ನಡ ಜನಪದದ ಪ್ರಾಚೀನತೆ, ಕವಿರಾಜಮಾರ್ಗದ ಕನ್ನಡ ಜನಪದ, ಬಲೀಂದ್ರನ ಆರಾಧನೆ ಮತ್ತು ಕನ್ನಡ ಸೃಜನಶೀಲತೆ, ನಾಗಾರಾಧನೆಯ ಪ್ರಾಚೀನ ರೂಪಗಳು ಮತ್ತು ಕನ್ನಡ ಸಂಸ್ಕೃತಿ, ಪ್ರಾಚೀನ ಆಚರಣೆ ಮತ್ತು ಆದಿಕಲೆಯ ಪೂರ್ವಾಪರಗಳು ಎನ್ನುವ ಅಧ್ಯಾಯಗಳು ಈ ನೆಲದ ವೈಶಿಷ್ಟ್ಯವನ್ನು ವಿವರಿಸುತ್ತದೆ.ನಮ್ಮ ಶ್ರಮಜೀವಿ ಮತ್ತು ದಲಿತವರ್ಗ ಕಟ್ಟಿಕೊಂಡು ಬಂದ ಅನುಭವ ಪರಂಪರೆಯನ್ನು ಆಧುನೀಕರಣದಿಂದ ದೇಸಿಸಾಹಿತ್ಯ ಪರಂಪರೆ ಕ್ಷೀಣಿಸುತ್ತಿದ್ದು, ಇದು ಕನ್ನಡ ಸಾಹಿತ್ಯದ ಮೇಲೆ ಪ್ರಭಾವ ಬೀರುತ್ತಿದೆ.ಇಂತಹಾ ಸಂದಿಗ್ದ ಪರಿಸ್ಥಿತಿಯಲ್ಲಿ ಈ ಪುಸ್ತಕ ಮೂಡಿಬಂದಿರುದು ಗಮನಾರ್ಹ.
©2024 Book Brahma Private Limited.