ಮಾರ್ಗ-೮

Author : ಎಂ.ಎಂ. ಕಲಬುರ್ಗಿ

Pages 394

₹ 320.00




Year of Publication: 2016
Published by: ಸಪ್ನ ಬುಕ್ ಹೌಸ್

Synopsys

ಡಾ. ಎಂ.ಎಂ.ಕಲಬುರ್ಗಿಯವರ ಮರಣಾನಂತರ ಅವರ 79ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಅವರು ಈ ಸಂಪುಟ ಪ್ರಕಾಶನಗೊಳ್ಳುವಂತೆ ಆಸಕ್ತಿವಹಿಸಿದರು. ಮಾರ್ಗ ಸಂಪುಟ ಸರಣಿಯ ಎಂಟನೆಯ ಸಂಪುಟ ಇದು. ಇದರಲ್ಲಿ 114 ಲೇಖನಗಳು ಸೇರಿವೆ. ಈ ಲೇಖನಗಳನ್ನು ವಿಷಯಾನುಸಾರ ಆತ್ಮಕಥೆ, ಪ್ರಬಂಧ, ಭಾಷಣ, ವ್ಯಕ್ತಿಚಿತ್ರ, ಮುನ್ನುಡಿ, ಬೆನ್ನುಡಿ, ಅರಿಕೆ, ಇತರ ಎಂದು 8 ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ಮೊದಲಭಾಗ ಕಲಬುರ್ಗಿಯವರ ಜೀವನ, ಪರಿಸರ, ಸಾಹಿತ್ಯಿಕ, ಸಾಮಾಜಿಕ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಸಂಗತಿಗಳನ್ನು ನಿರೂಪಿಸುವ 20 ಪುಟಗಳ 'ನನ್ನ ಬದುಕು' ಆತ್ಮಕಥೆಯನ್ನು ಒಳಗೊಂಡಿದೆ. ನಂತರದ ಏಳು ಭಾಗಗಳು ಕ್ರಮವಾಗಿ ಸಂಶೋಧನೆ, ಛಂದಸ್ಸು, ಭಾಷೆ, ಧರ್ಮ, ಪ್ರತಿಕ್ರಿಯೆ, ಸಮಾಜ, ಸಂಶೋಧನೆಯ ಸ್ವರೂಪ, ಬಸವಣ್ಣನವರ ನಿಜ ಚರಿತ್ರೆ, ಲಾವಣಿ, ಸಮ್ಮೇಳನ, ವಿಚಾರ ಸಂಕಿರಣ, ಗ್ರಂಥ ಬಿಡುಗಡೆ, ಅಧ್ಯಕ್ಷೀಯ ಭಾಷಣ, ಉದ್ಘಾಟನಾ ಭಾಷಣ, ವ್ಯಕ್ತಿಚಿತ್ರ, ಬೇರೆಯವರ ಕೃತಿಗಳಿಗೆ ಬರೆದ ಮುನ್ನುಡಿ, ಬೆನ್ನುಡಿ, ತಮ್ಮ ಕೃತಿಗಳಿಗೆ ಬರೆದ ಅರಿಕೆ, ಸಂಪಾದಕೀಯ, ಸಾಂಧರ್ಭಿಕ ಬರಹಗಳು ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಬರಹಗಳಿವೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books