ಲತಾ ಗುತ್ತಿಯವರು ಪ್ರವಾಸ ಸಾಹಿತ್ಯ ವಿಶ್ವ ಸಂಸ್ಕ್ರತಿಗಳು ಸಂಶೋದನಾ ಗ್ರಂಥವಾಗಿದೆ. ಸಂಸ್ಕೃತಿ, ದೇಶ, ಭಾಷೆ, ಧರ್ಮ, ಜನಾಂಗ ನಾಗರಿಕತೆಗಳು ಭಿನ್ನ ಭಿನ್ನವಾಗಿದ್ದರೂ ಅವುಗಳೆಲ್ಲದರ ಆಂತರ್ಯದಲ್ಲಿ ಜೀವಂತವಾಗಿರುವ ಚೈತನ್ಯಮಯೀ ಸಂಸ್ಕೃತಿಯ ಸ್ವರೂಪವನ್ನು ಹಿಡಿದು ಬಿಂಬಿಸಿದ್ದಾರೆ. ಸಂಸ್ಕೃತಿಯ ಕೇಂದ್ರ ಬಿಂದುವಿನಿಂದಾಗಿ ಎಲ್ಲ ದಾರಿಗಳು ತೆರೆದುಕೊಳ್ಳುತ್ತವೆ. ಉತ್ತರ-ದಕ್ಷಿಣ ಅಮೇರಿಕ, ಆಫ್ರಿಕ, ಆಸ್ಟ್ರೇಲಿಯಾ, ಯುರೋಪು, ಏಷಿಯಾ-ರಾಷ್ಟ್ರಗಳ ಯಾನಕ್ಕೆ ಪಥಗಳು ಕವಲುಗೊಳ್ಳುತ್ತವೆ. ಎತ್ತೆತ್ತ ಸುತ್ತಿ ಬಳಸಿ ಸಂಚರಿಸಿದರು ಮತ್ತೆ ಅವೆಲ್ಲ ಮಾರ್ಗಗಳೂ ಸಂಸ್ಕೃತಿಯ ಪರಿಪ್ರೇಕ್ಷ್ಯದಲ್ಲಿ ಸಂಗಮವಾಗುತ್ತಿವೆ. ಹೀಗಾಗಿ ಪ್ರವಾಸದ ಪರಿಕಲ್ಪನೆ ಕೊಡುವ ಮೊದಲನೆಯ ಅಧ್ಯಾಯದ ಜತೆಗೇ ಸಂಸ್ಕೃತಿ ಪರಾಮರ್ಶೆಯ ಎರಡನೆಯ ಅಧ್ಯಾಯವನ್ನೂ ಒಟ್ಟಿಗೆ ಓದಿಕೊಂಡು ಹೊರಟರೆ ಮುಂದಿನ ಅಧ್ಯಾಯಗಳಲ್ಲಿ ಬರುವ ವಿವರಗಳ ಗ್ರಹಿಕೆಗೆ, ಒಟ್ಟಾರೆ ಮಹಾಪ್ರಬಂಧದ ಅನುಸಂಧಾನಕ್ಕೆ ಕೀಲಿಕೈಯಾಗುತ್ತೆ.
©2025 Book Brahma Private Limited.