‘ತವರು ಬಣ್ಣ ಹುಟ್ಟುಕೊಂಡು’ ಲೇಖಕಿ ಅಂಜನಾ ಕೃಷ್ಣಪ್ಪ ಅವರು ರಚಿಸಿರುವ ‘ಜನಪದಗಳ ವಿಶ್ಲೇಷಣ ಲೇಖನ ಸಂಕಲನ. ಜನಪದ ಹಾಡುಗಳ ವಿಶ್ಲೇಷಣೆ ಮಾಡಲಾಗಿದೆ. ಜನಪದರ ಹಾಡು ಅವರು ನಂಬಿದ ಆಹಾರಕೊಟ್ಟು ಕಾಪಾಡುವ ಭೂಮಿತಾಯಿ ಸ್ಮರಿಸುವ ರೀತಿ, ಸೃಜನಶೀಲ ಸಾಹಿತ್ಯ ರಚನೆ ಕಾಣುತ್ತದೆ. ಅನಾಮಧೇಯ, ಸಮಷ್ಠಿ ಸ್ವರೂಪದ ರಚನೆ ನಿರೂಪಣಾ ವಿಧಾನ, ನಿರೂಪಣಾ ಸಂಧರ್ಭಗಳ ವಿಷಯವು ಶಿಷ್ಠ ಸಾಹಿತ್ಯಕ್ಕಿಂತ ಭಿನ್ನ. ಶಿಷ್ಠ ಮೂಲನೆಲೆಗಳನ್ನು ಬದಲಿಸಿದಂತೆ ಪರಸ್ಪರ ಪೂರಕವಾಗಿವೆ.
ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...
READ MORE