ಮರುಳ ಮುನಿಯನ ಕಗ್ಗ - ತಾತ್ಪರ್ಯ ಕನ್ನಡ ನಾಡು ಕಂಡ ಆಚಾರ್ಯ ಡಿ.ವಿ.ಜಿ ಅವರ ಮರುಳ ಮುನಿಯನ ಕಗ್ಗದ ತಾತ್ಪರ್ಯ ವನ್ನು ಒಳಗೊಂಡಿರುವ ಕೃತಿ. ಮರುಳ ಮುನಿಯನ ಕಗ್ಗಗಳ ತಾತ್ಪರ್ಯಗಳನ್ನು ಕವಿತಾ ಕೃಷ್ಣ ಅವರು ವಿವರಿಸಿದ್ದಾರೆ.
ಡಿ.ವಿ.ಜಿ ಅವರ ಮಂಕು ತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗ ಈ ಎರಡೂ ಕಗ್ಗಗಳನ್ನು ಕನ್ನಡದ ಭಗವದ್ಗೀತೆಗಳು ಎಂದು ಕರೆಯಲಾಗುತ್ತದೆ. ಮಂಕುತಿಮ್ಮನ ಕಗ್ಗ ಹೊರಗಣ್ಣಾದರೆ, ಮರುಳ ಮುನಿಯನ ಕಗ್ಗ ಒಳಗಣ್ಣಾಗಿದೆ. ನಮ್ಮ ಒಳ ಹೊರ ನೋಟಗಳು ಸಾರ್ಥಕವಾಗಬೇಕಾದರೆ, ಭಾರತೀಯ ಋಷಿ ಜೀವನದ ಮೇಲೆ ಮೂಡಿದ ಜ್ಞಾನ ಲಭಿಸಬೇಕಾದರೆ ಡಿ.ವಿ.ಜಿ. ಅವರ ಈ ಎರಡೂ ಕೃತಿಗಳ ಅಧ್ಯಯನ ಮಾಡಬೇಕಾದುದು ಅಗತ್ಯ. ಕವಿತಾ ಕೃಷ್ಣ ಅವರು ಈ ಹಿಂದೆ ಮಂಕುತಿಮ್ಮನ ಕಗ್ಗವನ್ನು ವ್ಯಾಖ್ಯಾನ ಮಾಡಿದ್ದರು. ಇದೀಗ 'ಮರುಳ ಮುನಿಯನ ಕಗ್ಗ' ವ್ಯಾಖ್ಯಾನಿಸಿದ್ದಾರೆ.
©2025 Book Brahma Private Limited.