ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಅದರ ಆರಂಭ ಕಾಲದಿಂದ ಆಧುನಿಕ ಕಾಲದವರೆಗೆ ಆಗಿರುವ ಬೆಳವಣಿಗೆಗಳು, ಪಲ್ಲಟಗಳ ಮೂಲಕ ಅರಿಯುವ ಯತ್ನ ಈ ಕೃತಿ. ಇಲ್ಲಿ ’ರಾಮಾಯಣ-ಮಹಾಭಾರತ’, ’ಪುರಾಣಗಳು’, ’ವಸ್ತುರಸ’, ’ಚರಿತ್ರೆ-ಜೀವನ ಚರಿತ್ರೆ’, ’ಶಾಸ್ತ್ರಕೃತಿಗಳು’, ’ಅಭಿವ್ಯಕ್ತಿತಂತ್ರ’, ’ಮಾರ್ಗದೇಸಿ’, ’ಕಾವ್ಯ-ಕಲ್ಪನೆ’, ’ಸ್ತ್ರೀ ಸಂವೇದನೆ’, ’ಮೌಲ್ಯ ಪ್ರಜ್ಞೆ-ಸಾಮಾಜಿಕ ಅರಿವು’ ಮುಂತಾದ ಲೇಖನಗಳಿವೆ.
ಡಾ. ಎ. ರಂಗಸ್ವಾಮಿ ಮತ್ತು ಶಿವರಾಮಯ್ಯ ಕೃತಿಯನ್ನು ಸಂಪಾದಿಸಿದ್ದಾರೆ.
ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...
READ MORE