`ಶರೀಫ ರಸಾಯನ' ವ್ಯಾಖ್ಯಾನ ಮತ್ತು ವಿಶ್ಲೇಷಣಾತ್ಮಕ ಬರಹಗಳ ಪುಸ್ತಕವಿದು. ಲೇಖಕ ಬಸವಾನಂದ ಸ್ವಾಮಿ ರಚಿಸಿದ್ದಾರೆ. ಕವಿಗಳು ಕೋಟ್ಯಾನುಕೋಟಿ ಇದ್ದಾರು, ಆದರೆ ವರಕವಿಗಳು ಕೋಟಿಗೊಬ್ಬರು ಸಿಗಲಾರರೆನೋ! ಅಂಥ ಕೋಟಿಗೊಬ್ಬ ವರಕವಿಗಳ ಪೈಕಿ ಶಿಶುನಾಳ ಶರೀಫರು ಒಬ್ಬರು. ಹರಕರುಣೆ ಹಾಗೂ ಗುರುಕೃಪೆಗಳನ್ನು ಪಡಕೊಂಡ ದಿವ್ಯಚೇತನ. ಪಂಡಿತ ಪರಾಮರ್ಶೆಗೆ ಹೆಸರಾದಂತೆ ಅನುಭಾವ ಶ್ರೀಮಂತಿಕೆಗೂ ಹೆಸರಾದ ಮನಗಂಡಿಯ ಬಸವಾನಂದ ಶ್ರೀಗಳು, ಶರೀಫರ ಪದಗಳಲ್ಲಿ ಹುದುಗಿದ ತತ್ವರಸಾಯನವನ್ನು ಸರ್ವರಿಗೂ ತಿಳಿಯುವ ಸರಳ ಭಾಷೆಯಲ್ಲಿ ಈ “ಶರೀಫ ರಸಾಯನ”ದಲ್ಲಿ ಉಣಬಡಿಸಿದ್ದಾರೆ; ಮಾತ್ರವಲ್ಲ, ಹನ್ನೆರಡು ಅಧ್ಯಾಯಗಳಲ್ಲಿ ವಿಸ್ತರಿಸಿ ಕ್ರಮಬದ್ಧಗೊಳಿಸಿದ್ದಾರೆ ಎಂದು ಕೃತಿಯ ಕುರಿತು ವಿವರಿಸಲಾಗಿದೆ.
©2025 Book Brahma Private Limited.