ಕಾನೂನು ಏನು ಹೇಳುತ್ತೆ? ಕೌಂಡಿನ್ಯ ಅವರ ದೇಶ ವಿದೇಶಗಳ ಕಾನೂನಿನ ಅಪರಾಧ ಮತ್ತು ಕಾಣೂನಿನ ವಿಶ್ಲೇ಼ಷಣೆ ಆಧಾರಿತ ಕೃತಿಯಾಗಿದೆ. ಒಂದು ಪ್ರಾಂತ್ಯವಾಗಲಿ, ಒಂದು ರಾಜ್ಯವಾಗಲಿ ಅಥವಾ ಅಖಂಡ ದೇಶವಾಗಲಿ ಕಾನೂನು ಎಂಬುದು ಹಿಂದೆ ಇತ್ತು. ಈಗ ಬದಲಾಗಿರುವ ರೂಪದೊಂದಿಗೆ ಅನುಷ್ಠಾನದಲ್ಲಿದೆ, ಇತ್ತೀಚಿಗಿನ ವರ್ಷಗಳಲ್ಲಿ ಒಂದು ದೇಶಕ್ಕೆ ಒಂದೇ ರೀತಿಯ ಕಾನೂನಿನ ವ್ಯವಸ್ಥೆ ಇದೆ. ಆ ದೇಶದಲ್ಲಿ ಪ್ರಜಾಪ್ರಭುತ್ವ ಇರಲಿ ಅಥವಾ ಕಮ್ಯುನಿಸಂ ಇರಲಿ ಅಥವಾ ಡಿಕ್ಟೇಟರ್‌ಂಪ್ ಇರಲಿ, ದೇಶದ ಉದ್ದಗಲಕ್ಕೂ ಒಂದೇ ರೀತಿಯ ಕಾನೂ ಅನ್ವಯವಾಗುತ್ತದೆ. ಏನನ್ನು ಮಾಡಬಾರದು? ಏನು ಮಾಡಿದರೆ ತಪ್ಪಾಗುತ್ತದೆ? ಆ ತಪ್ಪಿಗೆ ಶಿಕ್ಷೆ ಏನು? ಒಂದು ದೇಶಲ್ಲಿ ವಾಸ ಮಾಡುತ್ತಿರುವವರು ಪಾಲಿಸಬೇಕಾದ ನಿಯಮಗಳೇನು? ಆ ನಿಯಮಗಳನ್ನು ಮೀರಿದರೆ ಯಾವ ಶಿಕ್ಷೆ ಆಗುತ್ತದೆ? ಇದೆಲ್ಲವನ್ನೂ ರೂಪಿಸಲಾಗುತ್ತದೆ. ಈಗ ದೇಶಕ್ಕೆ ಒಂದೇ ಮಾದರಿಯ ಕಾನೂನು, ಆದರೆ ಹಿಂದೆ ಆ ರೀತಿ ಇರಲಿಲ್ಲ. ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಮತ್ತು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಈ ಕಾನೂನು ಬೇರೆ ಬೇರೆ ಆಗಿರುತ್ತಿತ್ತು. ಅಪರಾಧ ಎಂಬುದು ಸರ್ವಕಾಲಿಕ ಮತ್ತು ಸರ್ವ ವ್ಯಾಪಕ ಹಲವಾರು ಮಂದಿ ಒಂದು ಬಡಾವಣೆಯಲ್ಲಿ ಅಥವಾ ಒಂದೇ ವಾಸವಾಗಿದ್ದಾರೆ ಎಂದರೆ ಅಲ್ಲಿ ಯಾವ ರೀತಿಯಿಂದಲಾದರೂ ಸಹ ಅಪರಾಧ ನಡೆಯುತ್ತದೆ. ಇದರ ಸ್ವರೂಪ ಬದಲಾಗಿರುತ್ತದೆ. ಅಪರಾಧದ ಪ್ರಮಾಣ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಆದರೆ ಪ್ರತಿನಿತ್ಯ, ಪ್ರತಿಕ್ಷಣ ಎಲ್ಲಾದರೊಂದು ಕಡೆ ಅಪರಾಧ ನಡೆಯುತ್ತಿರುತ್ತದೆ. ಈ ಅಪರಾಧ ನಡೆಯದ ಕ್ಷಣ ಇಲ್ಲವೇ ಇಲ್ಲ. ಪ್ರತಿ ನಿಮಿಷ. ಕ್ಷಣಗಳಲ್ಲಿ ಮನುಷ್ಯ ತಪ್ಪು ಮಾಡುತ್ತಿರುತ್ತಾನೆ. ಅಂತಹ ಅಪರಾಧಗಳ ವಿಶ್ಲೇಷಣೆ ಮಾಡುತ್ತಾ, ಅದಕ್ಕೆ ಸಂಬಂಧ ಪಡುವ ಶಿಕ್ಷೆ ಏನು ಎಂಬುದನ್ನು ತಿಳಿಸುವುದೇ.. ಕೃತಿ ಎಂದು ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.