ಕುವೆಂಪು-ಜಿಎಸ್‌ಎಸ್ ಗುರು-ಶಿಷ್ಯರು. ಕುವೆಂಪು ದೊಡ್ಡ ಆಲ, ಅಸಂಖ್ಯರಿಗೆ ದಾರಿದೀಪ. ಜಿಎಸ್‌ಎಸ್ ಅಂಥ ಒಬ್ಬ ದೀಪದಾರಿ. ಅಂಥ ಗುರು-ಶಿಷ್ಯರ ಚಿಂತನೆಗಳು ಒಂದೇ ಕೃತಿಯಲ್ಲಿ ಮರು ಅವಲೋಕನ (ರೀ ವಿಸಿಟ್) ಮಾಡಲಾಗಿದೆ. ಇಲ್ಲಿ ಡಾ. ಲಕ್ಕಪ್ಪಗೌಡರಂಥ ಹಿರಿಯರಿಂದಿಡಿದು ಸದ್ಯ ಸಂಶೋಧನೆ ಮಾಡುತ್ತಿರುವ ನವ ವಿದ್ವಾಂಸರವರೆಗೆ ಬರೆದ ಲೇಖನಗಳು ಇಲ್ಲಿವೆ. ಕುವೆಂಪು ಜಿಎಸ್‌ಎಸ್ ಅವರು ಕಾವ್ಯ, ಕಾವ್ಯ ಮೀಮಾಂಸೆ ಕಟ್ಟಿದ ಬಗೆ, ವಿವಿಧ ಪ್ರಕಾರಗಳಲ್ಲಿ ಅವರ ಪ್ರಯೋಗಶೀಲತೆಗಳನ್ನು ಇಲ್ಲಿನ ಲೇಖನಗಳು ಪ್ರತಿಪಾದಿಸುತ್ತವೆ. ಈ ಇಬ್ಬರನ್ನು ಅರಿಯುವ ಹೊಸ ಯತ್ನವಾಗಿದೆ. ಡಾ. ಪರಶುರಾಮ ಅವರು ಕ್ರಿಯಾಶೀಲ ಅಧ್ಯಾಪಕರು. ಈ ಕೃತಿಯ ಮೂಲಕ ಮತ್ತೊಮ್ಮೆ ಕುವೆಂಪು ಜಿಎಸ್‌ಎಸ್ ಅವರನ್ನು ಮನನ ಮಾಡುವ ಕೆಲಸ ಮಾಡಿದ್ದಾರೆ.
©2025 Book Brahma Private Limited.