ವಚನ ಸಾಹಿತ್ಯದ ಆಂದೋಲನ ಕರ್ನಾಟಕದ ಬಹುಮುಖ್ಯ ಸಾಮಾಜಿಕ ಘಟ್ಟ. ವಚನ ಸಾಹಿತ್ಯದ ಆಂದೋಲನ ಮತ್ತು ಅದಕ್ಕೆ ಸಂಬಂಧಿಸಿದ ಸಾಹಿತ್ಯ ಕೃತಿಗಳ ಬಗೆಗಿನ ಅಮೂಲ್ಯ ಬರಹಗಳು, ನಾಲ್ಕು ದಶಕಗಳ ಕಾಲ ವಚನಕಾರರ ಕುರಿತು ಮತ್ತು ಸಾಹಿತ್ಯ ಕೃತಿಗಳ ಬಗ್ಗೆ ಬರೆದ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
ಕನ್ನಡ ಸಾಹಿತ್ಯ ಲೋಕದ ಸಂಶೋಧಕ ದಿಗ್ಗಜರೆಂದೇ ಖ್ಯಾತರಾಗಿರುವ ಎಚ್.ದೇವಿರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ (ಈಗ ದಾವಣಗೆರೆ ಜಿಲ್ಲೆ) ಮಲ್ಲಿಗೇನಹಳ್ಳಿಯಲ್ಲಿ ಜನಿಸಿದರು, ಶ್ರೇಷ್ಠ ಉನ್ನತ ಮಟ್ಟದ ಸಂಶೋಧಕರಾಗಿದ್ದಂತೆಯೇ ಒಳ್ಳೆಯ ಕಾದಂಬರಿಕಾರರೂ, ಕಲೆಗಾರರೂ, ಜೀವನ ಚರಿತ್ರಕಾರರೂ ಆಗಿದ್ದ ದೇವಿರಪ್ಪ ಅವರಿಗೆ ಹಲವು ಗೌರವ, ಪ್ರಶಸ್ತಿಗಳು ಸಂದಿವೆ. 1975ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಾಹಿತ್ಯ ಪ್ರಶಸ್ತಿಯಲ್ಲಿ ಸಿರಿಗೆರೆಯ ತರಳಬಾಳು ಸಂಸ್ಥೆಯು ದೇವಿರಪ್ಪ ಅವರನ್ನು ವಿಶ್ವ ಮಾನವ ಪತ್ರವನ್ನು ನೀಡಿ ಗೌರವಿಸಿದೆ. ಹೊನ್ನಾಳಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಶ್ರೀ ಎಚ್. ದೇವೀರಪ್ಪ (1913-1988) ಅವರು ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ...
READ MORE