ಈ ಸಂಪುಟದ ಪ್ರಬಂಧಗಳು ವಿಷಯ ವೈವಿಧ್ಯತೆಯಿಂದ ಕೂಡಿವೆ. ವರ್ಗೀಕರಣ ಮಾಡುವುದು ಸಾಧ್ಯವಿಲ್ಲ. ಪ್ರಾಚೀನ ಕನ್ನಡ ಸಾಹಿತ್ಯ, ಧರ್ಮ, ವಚನಸಾಹಿತ್ಯ - ಶರಣ ಧರ್ಮ, ವೀರಶೈವ ಧರ್ಮ ಚತುರಾಚಾರ್ಯರ ಪರಿಕಲ್ಪನೆ ಮತ್ತು ಅವರ ಪೀಠವಿಚಾರ, ಪಂಚಪೀಠಗಳ ಚರ್ಚೆ, ಪಂಚಮಠ, ಪಂಚಮಸಾಲಿ ಪರಿಕಲ್ಪನೆ, ಕುರುಬ-ಲಿಂಗಾಯತ ಸಮಾಜ, ಶೈವರ ದೇವಾಲಯಗಳು, ಕೃಷ್ಣದೇವರಾಯ: ತೆಲಗು ಸಂಸ್ಕೃತಿಯ ಆಕ್ರಮಣ, ವ್ಯಕ್ತಿನಾಮಗಳು, ಗ್ರಾಮನಾಮಗಳು, ವಿಷ್ಣುವರ್ಧನ; ತಮಿಳು ಸಂಸ್ಕೃತಿಯ ಆಗಮನ, ಚಾಮುಂಡರಾಯನ ತಮಿಳು ಪ್ರೀತಿ, ಗಂಗರಾಜನ ಮರಾಠಿ ಪ್ರೀತಿ, ಸಿದ್ಧಾಂತ ಶಿಖಾಮಣಿ: ಸೃಷ್ಟಿಸಂದರ್ಭ, ಅನುಭವ ಮಂಟಪ: ಹುಟ್ಟು-ಮರುಹುಟ್ಟು, ವಿರಕ್ತ ಪರಂಪರೆಯ ಎರಡು ಪ್ರಥಮ ಮಠಗಳು, (ವೀರ) ಶೈವ ಸಿದ್ಧಾಂತದ ಕೇಂದ್ರಗಳು: ದ್ವಾರಸಮುದ್ರ, ಹಂಪಿ, ಶಿವಗಂಗೆ ಮುಂತಾದ ವಿಷಯದ ಕುರಿತ ಪ್ರತಿಯೊಂದು ಪ್ರಬಂಧವೂ ಕನ್ನಡ ಸಂಶೋಧನಾ ಕ್ಷೇತ್ರದ ಅರಿವನ್ನು ವಿಸ್ತರಿಸುತ್ತದೆ. ಹಾಗೆಯೇ ಹೊಸ ಚರ್ಚೆಗೆ ಅವಕಾಶ ಒದಗಿಸುತ್ತದೆ. 2004ರಲ್ಲಿ ಸಪ್ನ ಬುಕ್ ಹೌಸ್, ಬೆಂಗಳೂರು ಈ ಪುಸ್ತಕವನ್ನು ಮೊದಲಿಗೆ ಪ್ರಕಟಿಸಿತ್ತು.
©2024 Book Brahma Private Limited.