ರಾಮಾಯಣ ಕೃತಿಯಲ್ಲಿ ಬಳಸಲಾದ ಶೈಲಿಯು ಓದುಗರಲ್ಲಿ ಅಚ್ಚರಿಯನ್ನು ಮೂಡಿಸುವಂತಿದೆ. ವಾಲ್ಮೀಕಿ ಮಹರ್ಷಿಯವರ ಕಥೆ ರಚಿಸುವ ಶೈಲಿಯು ಸುಲಭ ಮತ್ತು ಸುಂದರವಾಗಿದ್ದು, ಕವಿತೆಯ ನಿರೂಪಣಾ ಶೈಲಿಯ ವಿಶೇಷತೆ ಮತ್ತು ಕೃತಿಯಲ್ಲಿರುವ ರಹಸ್ಯವನ್ನು ವಿವರಿಸಲಾಗಿದೆ. ಮಾನವೀಯ ಬಾಂಧವ್ಯಗಳ ಚಿತ್ರಣ, ವಾಲ್ಮೀಕಿಯ ವಾಸ್ತುಶಿಲ್ಪ ಕಥನಶೈಲಿ ಮುಂತಾದವುಗಳ ಕುರಿತು ಲೇಖಕಿ ತಮ್ಮ ಅಭಿಪ್ರಾಯಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಮಹಾಕಾವ್ಯದ ನಾಯಕನಿಗೆ ಅವಶ್ಯವಾದ ಗುಣ ಸಂಪನ್ನತೆ, ಶಾರೀರಿಕ ಸಲ್ಲಕ್ಷಣಗಳನ್ನು ವಾಲ್ಮೀಕಿಯವರು ಪರಿಚಯಿಸಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ಕಂಡು ಬರುವ ಸಂಕೀರ್ಣತೆ, ಮಾನವೀಯ ಮತ್ತು ಕೌಟುಂಬಿಕ ಸಂಬಂಧಗಳು, ಪ್ರಕೃತಿ ಸೌಂದರ್ಯದ ವರ್ಣನೆ, ಮಾಯಾವಾಸ್ತವವಾದ, ರಾಜಧರ್ಮ ನಿರೂಪಣೆ, ಎಲ್ಲವನ್ನೂ ಸುಂದರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.