ಹನ್ನೆರಡನೇ ಶತಮಾನ ಕರ್ನಾಟಕದ ಇತಿಹಾಸದಲ್ಲೊಂದು ಪರ್ವ ಕಾಲವಾಗಿತ್ತು. ಮತೀಯ ಸಂಸ್ಥೆಗಳು ರಾಜರಜೊತೆ ಸೇರಿಕೊಂಡರೆ, ರಾಜರೊಡೆನೆ ಅನೋನ್ಯವಾಗಿದ್ದ ವರ್ತಕ ಮಂಡಲಿಗಲು ಶ್ರಮ ಜೀವಿಗಳ ಸುಲಿಗೆಯನ್ನು ತಮ್ಮ ಬಂಡವಾಳವಾಗಿ ಮಾಡಿಕೊಂಡಿದ್ದರು ಎಂಬುದಕ್ಕೆ ಈ ಕೃತಿಯಲ್ಲಿ ಸಾಕ್ಷಿ ಸಮೇತ ವಿವರಣೆಗಳನ್ನು ಒದಗಿಸಲಾಗಿದೆ. ಸಾಮಾನ್ಯ ಜನರ ಮೇಲೆ ವಿಧಿಸಿದ್ದ ತೆರಿಗೆಗಳು ಅವರು ಹೊರಲಾರದಷ್ಟು ಭಾರವಾಗಿತ್ತು. ಸಹಿಸಲು ಅಸಾಧ್ಯವಾದ ಅನ್ಯಾಯ ಅಪಮಾನಗಳನ್ನು ಹೊರಿಸುತ್ತಿದ್ದವು. ಅವುಗಳ ವಿರುದ್ಧ ಕಾಯಕ ಜೀವಿಗಳು ಹೂಡಿದ್ದ ಬಂಡಾಯದ ಸಾಹಿತ್ಯಕ ಅಭಿವ್ಯಕ್ತಿಯನ್ನು ಅಂದಿನ ವಚನ ಸಾಹಿತ್ಯದಲ್ಲಿ ಕಾಣಬಹುದು. ವೃತ್ತಿ ಜೀವಿಗಳ ಶೋಷಣೆಯ ವಿರುದ್ಧ ಹೊರಟು ಧಾರ್ಮಿಕ ನೈತಿಕ ನೆಲೆಗಟ್ಟಿನಲ್ಲಿಯೇ ನಿಂತ ಚಳುವಳಿ, ಏನನ್ನೂ ಬದಲಾಯಿಸಲಾರದೇ ತಾನೇ ಒಂದು ಜಾತಿ ಅಥವಾ ಧರ್ಮ ಪಂಥದ ರೂಪವನ್ನು ತಾಳಿತು. ಈ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ನೀಡಿದ್ದಾರೆ.
©2024 Book Brahma Private Limited.