‘ದಶಕಂಠ ರಾವಣ’ ಜಗದೀಶ ಶರ್ಮಾ ಅವರ ಕೃತಿಯಾಗಿದೆ. ಅವನು ಬ್ರಹ್ಮನ ಮರಿಮಗ. ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ. ಅಸ್ತ್ರವಿದ್ಯೆಯಲ್ಲಿ ಕುಶಲ. ತಂತ್ರಗಾರಿಕೆಯಲ್ಲಿ ಪ್ರಚಂಡ. ಬಲಿಷ್ಠ-ಸಮರ್ಥ-ಪರಾಕ್ರಮಿ. ಅನ್ನಿಸಿದ್ದನ್ನು ಸಾಧಿಸಿ ಮುಗಿಸುವವ. ಇಷ್ಟೆಲ್ಲ ಇದ್ದೂ ಬೇರೇನೋ ಆಯಿತು. ಒಂದು ವರ; ಒಂದು ತಪ್ಪುಒಂದು ತಪ್ಪು; ಒಂದು ಶಾಪ ಮತ್ತೊಂದು ವರ; ಮತ್ತೊಂದು ತಪ್ಪು ಮತ್ತೊಂದು ತಪ್ಪು; ಮತ್ತೊಂದು ಶಾಪ ಹೀಗೆ ಸಾಗಿತು ಅವನ ಬದುಕು ಏಕಾಯಿತು? ಏನಾಯಿತು?ತ್ರಿಭುವನ ತಲ್ಲಣನ ಇತಿವೃತ್ತ ಮೂಲಕ್ಕೆ ನಿಷ್ಠವಾದ ನಿರೂಪಣೆ ಅದೇ ದಶಕಂಠ ರಾವಣ.
©2024 Book Brahma Private Limited.