ವಿದ್ವಾಂಸ-ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಸಂಶೋಧನಾ ಲೇಖನಗಳ ಮೊದಲ ಸಂಪುಟ. ಕಲಬುರ್ಗಿ ಅವರು ತಮ್ಮ ಬರೆಹಗಳ ಸಂಪುಟಕ್ಕೆ ’ಮಾರ್ಗ’ ಎಂದು ಹೆಸರಿಟ್ಟಿದ್ದರು. ಮಾರ್ಗ ಸರಣಿಯಲ್ಲಿ ಪ್ರಕಟವಾದ ಮೊದಲ ಸಂಪುಟ ಇದು. ಈ ಸಂಪುಟದಲ್ಲಿ ಸಾಹಿತ್ಯ ಮಾರ್ಗ, ಗ್ರಂಥಸಂಪಾದನಾ ಮಾರ್ಗ ಮತ್ತು ವಿಮರ್ಶಾ ಮಾರ್ಗ ಎಂದು ಮೂರು ಮಾರ್ಗಗಳಿವೆ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಕಾಲದ ಸಾಹಿತ್ಯ ಘಟ್ಟಗಳನ್ನು ಒಳಗೊಂಡ ಬರೆಹಗಳಿವೆ. ಕೃತಿ ಶೋಧ, ಚರಿತ್ರಶೋಧ, ಸಂಸ್ಕೃತಿಶೋಧ, ಕ್ಷೇತ್ರಶೋಧ, ವಿಚಾರಶೋಧ, ಕವಿಪರಿಸರಶೋಧ ಎಂಬ ನೆಲೆಗಳಲ್ಲಿ ಕಲಬುರ್ಗಿ ಅವರು ನಡೆಸಿದ ಅನ್ವೇಷಣೆಯ ವಿಧಾನ, ಮತ್ತು ಫಲಿತಗಳನ್ನು ಇಲ್ಲಿನ ಬರಹಗಳಲ್ಲಿ ಗಮನಿಸಬಹುದು. ಈ ಸಂಪುಟವನ್ನು ಮೊದಲಿಗೆ ನರೇಶ & ಕಂಪನಿ, ಬೆಂಗಳೂರು (1979) ಪ್ರಕಟಿಸಿತ್ತು.
©2025 Book Brahma Private Limited.