ಕನ್ನಡ ಸಾಹಿತ್ಯಚರಿತ್ರೆ-ಈ ಕೃತಿಯನ್ನು ಕವಿ ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರು ರಚಿಸಿದ್ದಾರೆ. ಕ್ರಿಪೂ. 3ನೇ ಶತಮಾನದ ಅಶೋಕನ ಪ್ರಾಕೃತ ಶಾಸನದಲ್ಲಿ ದೊರೆತಿರುವ `ಇಸಿಲ` ಎಂಬ ಕನ್ನಡ ಪದದ ಪ್ರಸ್ತಾಪದಿಂದ ಕ್ರಿ.ಶ. 20ನೇ ಶತಮಾನದವರೆಗಿನ ಪ್ರಾಚೀನ ಸಾಹಿತ್ಯಚರಿತ್ರೆ ಯನ್ನು ವಿವರಿಸಲಾಗಿದೆ. 2ನೇ ವಿಭಾಗದಲ್ಲಿ ಜಾನಪದ ಸಾಹಿತ್ಯವೂ ಸೇರ್ಪಡೆಯಾಗಿದೆ. 3ನೇ ವಿಭಾಗದಲ್ಲಿಆಧುನಿಕ ಸಾಹಿತ್ಯ ವಿಭಾಗದಲ್ಲಿ ಹೊಸಗನ್ನಡದ ಕಾವ್ಯ, ಕಾದಂಬರಿ, ನಾಟಕ, ಸಣ್ಣಕತೆ, ವಿಮರ್ಶೆ, ಸಂಶೋಧನೆ ಹೀಗೆ 14 ಉಪವಿಭಾಗಗಳ ವಿವರಗಳಿವೆ. ಯಕ್ಷಗಾನ ಸಾಹಿತ್ಯ ಮತ್ತು ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಎಂಬ ಎರಡು ಹೊಸ ವಿಭಾಗಗಳೂ ಸೇರಿವೆ.
©2024 Book Brahma Private Limited.