ಲೇಖಕ ಅನಿಲ್ ರಾಜಿಮ್ ವಾಲೆ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕಿ ಎ. ಜ್ಯೋತಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಮಾರ್ಕ್ಸ್ ವಾದ ಎಂದರೇನು?. ಮಾರ್ಕ್ಸ್ ವಾದ ಎಂದರೆ ಬರೀ ಘೋಷಣೆ ಕೂಗುವುದು, ವ್ಯವಸ್ಥೆಯ ವಿರುದ್ಧ ಮಾತನಾಡುವುದು ಇತ್ಯಾದಿ ಮೊದಲಿನಿಂದಲೂ ಬಿಂಬಿಸುವ ಕೆಲಸ ನಡೆಯುತ್ತಲೇ ಇದೆ. ಮಾರ್ಕ್ಸ್ ವಾದ ಎಂದರೆ ಮಾನವೀಯತೆ. ಶೋಷಣೆ ವಿರುದ್ಧ ಬಂಡೆದ್ದ ನ್ಯಾಯವಾದ ಒಂದು ಪಥ. ದುಡಿವ ಕಾಯಕಕ್ಕೆ ಸೂಕ್ತವಾದ ಕೂಲಿ ಕೇಳುವ ಹಕ್ಕು ಎಂಬ ಪರಿಕಲ್ಪನೆಗಳಿಂದ ಜನರನ್ನು ದೂರ ಇರಿಸಲಾಗಿದೆ. ಬಸವಣ್ಣನ ಸಮಾನತಾ ಧರ್ಮ, ಸಕಲ ಜೀವಿಗಳಿಗೆ ಲೇಸನೇ ಬಯಸುವ ಮನುಷ್ಯತ್ವ ಎಲ್ಲವನ್ನೂ ಮಾರ್ಕ್ಸ್ ವಾದ ಒಳಗೊಂಡಿದೆ. ಎಲ್ಲರೂ, ಸಮಾನವಾಗಿ, ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತಾ, ಸಮಾನವಾಗಿ ಹಂಚಿಕೊಂಡು ತಿನ್ನುವುದು ಆಗಿದೆ. ಇಂತಹ ಸಂಗತಿಗಳ ಮೂಲಕ ಮಾರ್ಕ್ಸ್ ವಾದಕ್ಕೆ ಅಂಟಿರುವ ಕಳಂಕವನ್ನು ದೂರ ಮಾಡಲು ಲೇಖಕರು ಯತ್ನಿಸಿದ್ದನ್ನು ಈ ಕೃತಿಯಲ್ಲಿ ಕಾಣಬಹುದು.
©2025 Book Brahma Private Limited.