ಅಕ್ಕಮ್ಮನಿಂದ ಹಾನಗಲ್ ಕುಮಾರಸ್ವಾಮಿಗಳವರೆಗಿನ ಬಸವಾದಿ ಶರಣರ ಕುರಿತ 15 ಲೇಖನಗಳ ಸಂಗ್ರಹ ’ನಡೆನುಡಿ ಸಿದ್ಧಾಂತವಾದಲ್ಲಿ’. ಸುಮಾರು ಐದು ಸಾವಿರ ವರ್ಷದ ಮನುಕುಲ ಚರಿತ್ರೆಯಲ್ಲಿ ಮನುಪ್ರಣೀತ ಶ್ರೇಣೀಕೃತ ವ್ಯವಸ್ಥೆಯಿಂದ ಉಂಟಾದ ಮನುಷ್ಯ-ಮನುಷ್ಯರ ಮಧ್ಯದ ಕಂದಕ ಒಡೆದು ಎಲ್ಲಾ ಸ್ತರದ ಭೇದಗಳನ್ನು ತೊಡೆದು ಸರ್ವಸಮತೆಯ ಸಮಸಮಾಜ ಕಟ್ಟಲು ಹೊರಟ ಶರಣ ಚಳವಳಿಯ ವಿವಿಧ ಆಯಾಮಗಳ ಪರಿಚಯ ಇಲ್ಲಿದೆ.
“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್; ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...
READ MORE