ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳಲ್ಲಿ ಬಳಸಲ್ಪಡುವ ಕೆಲವೊಂದು ಪರಿಭಾಷೆಗಳಿಗೆ ವಿದ್ಯಾರ್ಥಿ ಮತ್ತು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ವಿವರಣೆಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಶೈಕ್ಷಣಿಕ ಚರ್ಚೆಗಳಲ್ಲಿ ಅಥವಾ ಬರವಣಿಗೆಯಲ್ಲಿ ಈ ಪಾರಿಭಾಷಿಕ ಪದಗಳನ್ನು ಬಳಸುವಾಗಿನ ವಿಭಿನ್ನ ಅರ್ಥ ವ್ಯಾಪ್ತಿ, ಸಮಾಜ ವಿಜ್ಞಾನದ ಓದು ಮತ್ತು ಬೋಧನೆಯಲ್ಲಿ ಪರಿಭಾಷೆಗಳನ್ನು ರೂಪಿಸಿಕೊಂಡು ಬಳಸುವುದರ ತೊಡಕಿನ ಬಗ್ಗೆ ಈ ಪದಕೋಶ ನೆರವಾಗುತ್ತದೆ. ದಿನನಿತ್ಯದ ಚರ್ಚೆಗಳಲ್ಲಿ, ಓದಿನಲ್ಲಿ, ಬರವಣಿಗೆಯಲ್ಲಿ ಬಳಸುವ ಅಧಿಕಾರ, ಅಭಿವೃದ್ಧಿ, ಅಸಂಘಟಿತ ವಲಯ,ಉತ್ಪಾದನೆ, ಉದಾರವಾದ, ಕೋಮುವಾದ, ದಲಿತ, ದೇಶೀಯತೆ, ಪರಂಪರೆ, ಪರಕೀಯತೆ ಮುಂತಾದ 66 ಪಾರಿಭಾಷಿಕ ಪದಗಳ ವಿವರಣೆ, ಅವುಗಳ ಉಪಯೋಗ, ಅವುಗಳನ್ನು ಬಳಸುವಾಗ ಅವುಗಳ ವಿಶಿಷ್ಟತೆಯನ್ನು ಗುರುತಿಸುವುದು ಹೀಗೆ ಹಲವು ವಿಷಯಗಳ ಕುರಿತು ಮಾಹಿತಿಯನ್ನುಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.