ಶ್ರೀ ರಾಜಗೋಪಾಲಾಚಾರಿಯವರು ಮಾಡಿದ ಮೂರು ಭಾಷಣಗಳನ್ನು ಈ ಕೃತಿಯೂ ಒಳಗೊಂಡಿದೆ. ಇಂಗ್ಲೀಷ್ ನಿಂದ ದೇ.ಜವರೇಗೌಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಭಾಷಣಗಳಲ್ಲಿ ರಾಜಗೋಪಾಲಾಚಾರಿಯವರು ತಮ್ಮ ವಿಶಾಲ ಜ್ಞಾನವನ್ನು ಬಳಸಿಕೊಂಡು ನಮ್ಮ ಸಂಸ್ಕೃತಿಯ ಮೂಲಗಳನ್ನು ವಿವರಿಸಿದ್ದಾರೆ. ಮಾನವನ ವ್ಯಕ್ತಿತ್ವಕ್ಕೆ ಗಂಭೀರತೆಯನ್ನು ನೀಡುವ ಸಂಸ್ಕೃತಿಯೆಂದರೆ ಆತ್ಮ ಸಂಯಮದ ಯಶಸ್ಸು ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ನಮ್ಮ ಸಂಸ್ಕೃತಿಯು ನಮ್ಮ ಕುಟುಂಬ ಮತ್ತು ಸಮಾಜವನ್ನು ಹೇಗೆ ನಡೆಸುತ್ತದೆ ಮತ್ತು ಸಂಸ್ಕೃತಿಯಲ್ಲಿ ಮತ ಧರ್ಮಶಾಸ್ತ್ರ ಹಾಗೂ ತತ್ತ್ವಶಾಸ್ತ್ರಗಳ ಪ್ರಭಾವವೇನು ಎಂಬುದರ ಕುರಿತು ವಿವರಗಳನ್ನು ಒದಗಿಸಲಾಗಿದೆ.
©2024 Book Brahma Private Limited.