’ಇಮಯಂ’ ಹೆಸರಿನಲ್ಲಿ ಕೃತಿಗಳನ್ನು ರಚಿಸುತ್ತಿದ್ದ ತಮಿಳಿನ ಖ್ಯಾತ ಬರಹಗಾರ ವಿ. ಅಣ್ಣಾಮಲೈ ಅವರ ’ಕೋವೇರು ಕಳುತೈಗಳ್’ ಕೃತಿಯ ಕನ್ನಡ ರೂಪ ’ಹೇಸರಗತ್ತೆಗಳು’.
ಜಾತಿ ಸಂಘರ್ಷದ ಕಥಾನಕ ಇದು. ಊರಿನಲ್ಲಿ ದಲಿತರನ್ನು ಸವರ್ಣೀಯರು ದೂರವಿಡುತ್ತಾರೆ. ಅದರಿಂದಲೂ ಹೊರಗಿರುವ ಅಗಸರ ಕುಟುಂಬವೊಂದರ ಬಯಕೆ, ಬವಣೆ, ವೇದನೆಗಳನ್ನು ಈ ಕಾದಂಬರಿಯು ನಮಗೆ ವಿವರಿಸುತ್ತದೆ. ಶೋಷಣೆಯು ಇಲ್ಲಿ ಎದ್ದು ಕಾಣಿಸದೇ ಇದ್ದರೂ ಅದು ಅಂತರ್ಗಾಮಿಯಾಗಿ ಕಾಡುವುದನ್ನು ಗುರುತಿಸಬಹುದು.
©2024 Book Brahma Private Limited.