ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಕ್ರೌರ್ಯ, ದಬ್ಬಾಳಿಕೆಗಳ ವಿರುದ್ದ ಅಲ್ಲಿನ ವಲಸಿಗರನ್ನು ಸಂಘಟಿಸಿದ ಕಥನವೇ ರಾಮಚಂದ್ರ ಗುಹಾ ಅವರ “ಗಾಂಧಿ ಬಿಫೋರ್ ಇಂಡಿಯಾ' ಕೃತಿ. ಕನ್ನಡದ ಹಿರಿಯ ಬರಹಗಾರ ಜಿ. ಎನ್. ರಂಗನಾಥ ರಾವ್ ಅವರು ಅದನ್ನು 'ಗಾಂಧಿ-ಮಹಾತ್ಮರಾದುದು' ಎಂಬ ಹೆಸರಿನಲ್ಲಿ ಎರಡು ಸಂಪುಟಗಳಲ್ಲಿ ಅನುವಾದ ಮಾಡಿದ್ದಾರೆ. ಮಹಾತ್ಮಗಾಂಧಿಯ ಆಫ್ರಿಕಾ ದಿನಗಳನ್ನು ಈ ಎರಡು ಬೃಹತ್ ಸಂಪುಟಗಳು ತೆರೆದಿಡುತ್ತವೆ. ಮಹಾತ್ಮ ಗಾಂಧೀಜಿಯ ಕುರಿತಂತೆ ಈಗಾಗಲೇ ಎರಡು ಕೃತಿಗಳನ್ನು ರಂಗನಾಥ ರಾವ್ ಕನ್ನಡಕ್ಕಿಳಿಸಿದ್ದಾರೆ. ಒಂದು ರಾಮಚಂದ್ರ ಗುಹಾ ಅವರ “ಬಾಪು ನಂತರದ ಭಾರತ', ಮತ್ತೊಂದು ರಾಜಮೋಹನ ಗಾಂಧಿಯವರ “ಮೋಹನದಾಸ-ಒಂದು ಸತ್ಯಕತೆ”. ರಂಗನಾಥ್ ರಾವ್ ಅವರ ಗಾಂಧಿಯಾತ್ರೆಯ ಮೂರನೆಯ ಕೊಡುಗೆ ಗುಹಾ ಅವರ ಕೃತಿಯ ಇನ್ನೊಂದು ಅನುವಾದ. ಮಹಾತ್ಮಗಾಂಧೀಜಿಯ ಹೋರಾಟಗಾರನನ್ನು ರೂಪಿಸಿದ್ದು ದಕ್ಷಿಣ ಆಫ್ರಿಕಾ. ಆದುದರಿಂದಲೇ ಗಾಂಧೀಜಿಯ ದ.ಆಫ್ರಿಕಾದ ಬದುಕು, ಹೋರಾಟಗಳನ್ನು ತಿಳಿದುಕೊಳ್ಳದೇ ನಾವು ಗಾಂಧೀಜಿಯನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಈ ನಿಟ್ಟಿನಲ್ಲಿ ಗುಹಾ ಅವರ ಈ ಕೃತಿ, ಗಾಂಧಿಯ ವ್ಯಕ್ತಿತ್ವವನ್ನು ನಮ್ಮದಾಗಿಸಲು ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ.
©2024 Book Brahma Private Limited.