ಇಲ್ಲಿರುವ ಎರಡು ನಾಟಕಗಳಲ್ಲಿ ಒಂದರಲ್ಲಿ ಮಹಾತ್ಮಗಾಂಧಿಯವರ ಪಾತ್ರವನ್ನು ತರುವ ಮೂಲಕ ನಾಟಕಕಾರ ಡಿ. ವಿಜಯಭಾಸ್ಕರ್ ಅವರು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಮೌಲ್ಯಗಳು ಕುಸಿದು, ಅಪಹಾಸ್ಯಕ್ಕೆ ಈಡಾಗುತ್ತಿರುವ ಚಿತ್ರಣವನ್ನು ಚಿತ್ರಿಸಿದ್ದಾರೆ.
ಸಾಧಿಸಿದ ಸ್ವಾತಂತ್ರ್ಯವನ್ನು ಸರಿಯಾಗಿ ಸಂಭಾಳಿಸಲಾಗದ ಜನತೆ ಇನ್ನೂ ಸಾಮ್ರಾಜ್ಯ ಶಾಹಿಯ ವೈಶಿಷ್ಟ್ಯವಾದ ವ್ಯಕ್ತಿಪೂಜೆ, ವಂಶಾಡಳಿತಕ್ಕೆ ಗೌರವ, ನಂತರ ಬೆಳೆದ ಸ್ವಜನಪಕ್ಷಪಾತ, ಲಂಚಕೋರತನ, ಗಾಂಧಿಯ ಹೆಸರಿನಲ್ಲಿಯೇ ಆಗುತ್ತಿರುವ ಅನ್ಯಾಯಗಳು, ದರೋಡೆಗಳು, ಜನಪ್ರತಿನಿಧಿಗಳ ದುಂಡಾವೃತ್ತಿ, ಚುನಾವಣೆಯಲ್ಲಿನ ಭ್ರಷ್ಟಾಚಾರ, ಗಾಂಧಿಗೇ ಮರಣದಂಡನೆ, ರಿಯಲ್ ಎಸ್ಟೇಟ್ ಸರಕಾರಗಳ ನಡುವಿನ ಅಪವಿತ್ರ ಮೈತ್ರಿ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ಲೇಖಕರು ನೀಡಿದ್ದಾರೆ.
©2024 Book Brahma Private Limited.