About the Author

ಎಸ್. ಲಕ್ಷ್ಮೀದೇವಿ ಹಲವಾರು ನಾಟಕಗಳ ನಿರ್ದೇಶನ, ಅಭಿನಯ, ಕಂಠದಾನ, ಕಿರುತೆರೆಯ ಕಲಾವಿದೆಯಾಗಿ ಪ್ರಭಾವಿತರಾದವರು. 

ಲಕ್ಷ್ಮೀದೇವಿ ಹುಟ್ಟಿದ್ದು ಬೆಂಗಳೂರಿನಲ್ಲಿ . ತಂದೆ ಸಾಥ್ವಿ. ತಾಯಿ ಈಶ್ವರಮ್ಮ. ಚಿಕ್ಕಂದಿನಿಂದಲೂ ನಾಟಕ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.  ಮೊದಲ ದರ್ಜೆಯಲ್ಲಿ ಎಂ.ಎ. ಪದವಿಯನ್ನು ಪಡೆದು ‘ಹೊಸಕೋಟೆಯ ತಾಲ್ಲೂಕಿನ ಗ್ರಾಮದೇವತೆಗಳು: ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್‌..ಡಿ. ಪದವಿಯನ್ನು ಪಡೆದಿದ್ದಾರೆ.

ಕಂಠದಾನ ಕಲಾವಿದೆಯಾಗಿ ಹಲವಾರು ಕಿರುತೆರೆಯ ಕಲಾವಿದೆಯರಿಗೆ ನೀಡಿದ ಕಂಠದಾನ. ರಂಗಕೃತಿಗಳ ರಚನೆ-ಸಂಪಾದನೆ-ಭಾಷಾಂತ ಮಾಡಿದ್ದಾರೆ. ಹಲವಾರು ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಂದ ದೊರೆತ ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. 

ಎಸ್. ಲಕ್ಷ್ಮೀದೇವಿ